Home ಟಾಪ್ ಸುದ್ದಿಗಳು ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ: ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ

ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ: ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ

ಚಿಕ್ಕಮಗಳೂರು: ಆರು ನಕ್ಸಲರು ಮುಖ್ಯವಾಹಿನಿಗೆ ಸೇರುವ ಕಾರ್ಯಕ್ರಮ ಡಿಢೀರ್ ಬೆಂಗಳೂರಿಗೆ ವರ್ಗಾವಣೆಗೊಂಡಿದೆ.

ಮುಂಡಗಾರು ಲತಾ, ಕುತ್ಲೂರು ಸುಂದರಿ, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್‌. ಜೀಶ್‌ ಬುಧವಾರ (ಜ.8) ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಎರಡೂವರೆ ದಶಕದಿಂದ ಬೇರುಬಿಟ್ಟಿದ್ದ ನಕ್ಸಲ್‌ ಚಟುವಟಿಕೆಗೆ ತೆರೆ ಬೀಳಲಿದೆ.

ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ದಲಿತ ಸಂಘಟನೆಗಳ ಮುಖಂಡರು, ನಕ್ಸಲರ ಕುಟುಂಬದವರು ಕಾದಿದ್ದರು.

ಶೃಂಗೇರಿಯಿಂದ ಚಿಕ್ಕಮಗಳೂರು ಕಡೆಗೆ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಆರು ನಕ್ಸಲರೊಂದಿಗೆ ಬರುತ್ತಿದ್ದರು. ಈ ವೇಳೆ ಮುಖ್ಯಮಂತ್ರಿ ಸೂಚನೆ ಮೇರೆಗೆ ಎಲ್ಲರನ್ನೂ ಪೊಲೀಸರು ಬೆಂಗಳೂರಿಗೆ ಕರೆದೊಯ್ದರು.

‘ನನ್ನ ಸಮ್ಮುಖದಲ್ಲೇ ನಕ್ಸಲರು ಮುಖ್ಯವಾಹಿನಿಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಯಸಿದ್ದಾರೆ. ಆದ್ದರಿಂದ ಬೆಂಗಳೂರಿಗೆ ಕಾರ್ಯಕ್ರಮ ಸ್ಥಳಾಂತರ ಆಗಿದೆ’ ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್.ಅಶೋಕ್ ತಿಳಿಸಿದರು.

Join Whatsapp
Exit mobile version