Home Uncategorized PFI ಸಂಘಟನೆ ನಿಷೇಧ ನಂತರದ ಪ್ರಕ್ರಿಯೆ ಜಾರಿಗೆ ರಾಜ್ಯಗಳಿಗೆ ಅಧಿಕಾರ ನೀಡಿದ ಕೇಂದ್ರ ಸರಕಾರ: ಗೃಹ...

PFI ಸಂಘಟನೆ ನಿಷೇಧ ನಂತರದ ಪ್ರಕ್ರಿಯೆ ಜಾರಿಗೆ ರಾಜ್ಯಗಳಿಗೆ ಅಧಿಕಾರ ನೀಡಿದ ಕೇಂದ್ರ ಸರಕಾರ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಪಿಎಫ್ ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ UAPA ಕಾಯಿದೆ ಅಡಿಯಲ್ಲಿ ಇಂದು ನಿಷೇಧಿಸಿದ ಕೇಂದ್ರ ಸರಕಾರ, ಅದರ ಅನುಷ್ಠಾನದ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿದೆ.

ಅದರಂತೆ, ನಿಷೇಧ ನಂತರದ ಪ್ರಕ್ರಿಯೆಗಳನ್ನು ಅಂದರೆ, ನಿಷೇಧಕ್ಕೆ ಒಳಪಟ್ಟ ಸಂಘಟನೆಯ, ಕಚೇರಿಗಳನ್ನು ಸೀಜ್ ಮಾಡುವುದು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿ, ರಾಜ್ಯ ಸರಕಾರಗಳು ನಿರ್ವಹಿಸಲಿವೆ ಎಂದವರು ತಿಳಿಸಿದರು.

ಕೇಂದ್ರದ ನಿರ್ದೇಶನದಂತೆ, ರಾಜ್ಯ ಸರಕಾರ, ಮುಂದಿನ ಪ್ರಕ್ರಿಯೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ, ಸುತ್ತೋಲೆ ಹೊರಡಿಸಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Join Whatsapp
Exit mobile version