Home ಟಾಪ್ ಸುದ್ದಿಗಳು 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಲಕ್ಷ್ಮೀಶ ತೋಳ್ಪಾಡಿಗೆ ಒಲಿದ ಗೌರವ

2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಲಕ್ಷ್ಮೀಶ ತೋಳ್ಪಾಡಿಗೆ ಒಲಿದ ಗೌರವ

ಬೆಂಗಳೂರು: 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡ ವಿಭಾಗದಲ್ಲಿ ಚಿಂತಕ, ಲೇಖಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿಗೆ ಪ್ರಶಸ್ತಿ ಸಂದಿದೆ.ಅವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಎನ್ನುವ ಪ್ರಬಂಧಕ್ಕೆ ಪ್ರಶಸ್ತಿಯ ಗರಿಮೆ ದೊರೆತಿದೆ.

ಸಾಹಿತ್ಯ ಅಕಾಡೆಮಿ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು 24 ಭಾಷೆಗಳಲ್ಲಿ ಬುಧವಾರ (ಡಿ.20) ಪ್ರಕಟಿಸಿದೆ. ಇದರಲ್ಲಿ 9 ಕವನಗಳು, 6 ಕಾದಂಬರಿಗಳು, 5 ಸಣ್ಣ ಕಥೆಗಳು, 3 ಪ್ರಬಂಧಗಳು ಮತ್ತು 1 ಸಾಹಿತ್ಯ ಅಧ್ಯಯನಗಳು 2023ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿವೆ.

ಮಾರ್ಚ್.12, 2024ರಲ್ಲಿ ನವದೆಹಲಿಯ ಕಾಮಿನಿ ಸಭಾಂಗಣದಲ್ಲಿ ನಡೆಯುವಂತ ಸಮಾರಂಭದಲ್ಲಿ ಒಂದು ಲಕ್ಷ ರೂ. ಮತ್ತು ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಲಾಗುತ್ತದೆ.

ಲೇಖಕ, ಚಿಂತಕ ಮತ್ತು ವಿದ್ವಾಂಸರಾಗಿರುವ ಲಕ್ಷ್ಮೀಶ ತೋಳ್ಪಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರು.

Join Whatsapp
Exit mobile version