Home ಟಾಪ್ ಸುದ್ದಿಗಳು ಮಹಾರಾಷ್ಟ್ರದಲ್ಲಿ 6 ತಿಂಗಳಲ್ಲಿ 4,872 ಹಸುಗೂಸುಗಳ ಸಾವು!

ಮಹಾರಾಷ್ಟ್ರದಲ್ಲಿ 6 ತಿಂಗಳಲ್ಲಿ 4,872 ಹಸುಗೂಸುಗಳ ಸಾವು!

ಮಹಾರಾಷ್ಟ್ರ: ರಾಜ್ಯದಲ್ಲಿ ಶಿಶುಗಳ ಮರಣದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ರಾಜ್ಯಾದ್ಯಂತ ಈ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳ​ ನಡುವೆ 4,872 ನವಜಾತ ಶಿಶುಗಳ ಸಾವು ನಡೆದಿವೆ ಎಂದು ಸರ್ಕಾರದ ಅಧಿಕೃತ ಅಂಕಿ ಅಂಶಗಳೇ ಹೇಳಿವೆ.

ಶಾಸಕ ಸಚಿನ್​ ಕಲ್ಯಾಣ ಶೆಟ್ಟಿ ಕೇಳಿದ ಪ್ರಶ್ನೆಗೆ ನೀಡಲಾದ ಲಿಖಿತ ಉತ್ತರದಲ್ಲಿ, ಪ್ರಸಕ್ತ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳ​ ನಡುವೆ ರಾಜ್ಯಾದ್ಯಂತ 4,800ಕ್ಕೂ ಅಧಿಕ ಕಂದಮ್ಮಗಳು ಸಾವಿಗೀಡಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ತಾನಜಿ ಸಾವಂತ್​ ವಿಧಾನಸಭೆಗೆ ಅಂಕಿಅಂಶ ಒದಗಿಸಿದ್ದಾರೆ. ಮೃತ ಶಿಶುಗಳ ವಯಸ್ಸು ಶೂನ್ಯದಿಂದ 28 ದಿನಗಳು ಮಾತ್ರ. ಸರಾಸರಿಗೆ ಹೋಲಿಸಿದರೆ ಪ್ರತಿದಿನ 23 ಶಿಶುಗಳ ಸಾವು ಸಂಭವಿಸಿವೆ ಎಂದು ಸಚಿವರು ಹೇಳಿದ್ದಾರೆ.

4,872 ಶಿಶುಗಳ ಪೈಕಿ 795 ಹಸುಗೂಸುಗಳು ಉಸಿರಾಟ ಸಮಸ್ಯೆಗೆ ಸಂಬಂಧಿಸಿದ ಕಾಯಿಲೆಗಳಿಂದ ಕೊನೆಯುಸಿರೆಳೆದಿವೆ. ಅತ್ಯಧಿಕ ಸಾವುಗಳು ರಾಜ್ಯಧಾನಿ ಮುಂಬೈ, ಥಾಣೆ, ಸೊಲ್ಲಾಪೂರ, ಅಕೋಲಾ, ನಂದೂರ್​ಬಾದ್​ನಲ್ಲಿ ಸಂಭವಿಸಿವೆ.

ಮಹಾರಾಷ್ಟ್ರದಲ್ಲಿ ಒಟ್ಟಾರೆ 52 ವಿಶೇಷ ನವಜಾತ ಶಿಶು ಆರೈಕೆ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಅನಾರೋಗ್ಯ ಶಿಶುಗಳಿಗೆ ಉಚಿತವಾಗಿ ಔಷಧಿ, ಪರೀಕ್ಷೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Join Whatsapp
Exit mobile version