Home ಟಾಪ್ ಸುದ್ದಿಗಳು ದೆಹಲಿಯ ಆರೆಸ್ಸೆಸ್ ಕಚೇರಿಗೆ CISF ಪಡೆಯಿಂದ ಭದ್ರತೆ ಒದಗಿಸಿದ ಕೇಂದ್ರ ಸರಕಾರ

ದೆಹಲಿಯ ಆರೆಸ್ಸೆಸ್ ಕಚೇರಿಗೆ CISF ಪಡೆಯಿಂದ ಭದ್ರತೆ ಒದಗಿಸಿದ ಕೇಂದ್ರ ಸರಕಾರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಚೇರಿಗೆ ಕೇಂದ್ರ ಸರಕಾರವು ಸಶಸ್ತ್ರ CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಭದ್ರತೆ ಒದಗಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೇಂದ್ರ ದೆಹಲಿಯ ಝಂಡೆವಾಲನ್‌ನಲ್ಲಿರುವ ಆರೆಸ್ಸೆಸ್ ಮುಖ್ಯ ಕಚೇರಿ ‘ಕೇಶವ್ ಕುಂಜ್’ ಮತ್ತು ‘ಉದಾಸಿನ್ ಆಶ್ರಮ’ದ ಬಳಿ ಇರುವ ಆರೆಸ್ಸೆಸ್‌ನ ಶಿಬಿರ ಕಚೇರಿಗೆ ಸೆಪ್ಟೆಂಬರ್ 1 ರಿಂದಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಭದ್ರತೆಯನ್ನು ಒದಗಿಸಲಾಗಿದೆ.

ಈ ಪಡೆಯು ಈ ಎರಡೂ ಕಚೇರಿಗಳ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸಲಿದ್ದು, ಸಿಬ್ಬಂದಿಗಳನ್ನು ಕಚೇರಿಗೆ ಕಾವಲಾಗಿ ನಿಯೋಜಿಸಲಾಗಿದೆ.

ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಈ ಭದ್ರತೆಯನ್ನು ಮಂಜೂರು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Join Whatsapp
Exit mobile version