Home ಟಾಪ್ ಸುದ್ದಿಗಳು ತಮಿಳುನಾಡು | ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ; ಭಯಾನಕ ವೀಡಿಯೋ ವೈರಲ್

ತಮಿಳುನಾಡು | ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ; ಭಯಾನಕ ವೀಡಿಯೋ ವೈರಲ್

ಚೆನ್ನೈ: ತಮಿಳುನಾಡಿನ ಸೇಲಂ ನಲ್ಲಿ ಎರಡು ಬಸ್ಸುಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ವಾಹನವೊಂದರಲ್ಲಿ ಅಳಪಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.

ಘಟನೆಯಲ್ಲಿ ಕನಿಷ್ಠ ಮೂವತ್ತು ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಮಿಳುನಾಡಿನ ಎಡಪ್ಪಾಡಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ತಿರುಚೆಂಗೋಡಿನಿಂದ ಬರುತ್ತಿದ್ದ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ. ಬಸ್ ಏಕಾಏಕಿ ನಿಂತ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರು ಕುಳಿತಲ್ಲಿಂದ ಎಸೆಯಲ್ಪಟ್ಟಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಸಂತ್ರಸ್ತರನ್ನು ಸೇಲಂ ಮತ್ತು ಎಡಪ್ಪಾಡಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version