Home ಟಾಪ್ ಸುದ್ದಿಗಳು ಬೆಕ್ಕಿಗೆ ಸೀಮಂತ ಮಾಡಿದ ದಂಪತಿ

ಬೆಕ್ಕಿಗೆ ಸೀಮಂತ ಮಾಡಿದ ದಂಪತಿ

ಚಾಮರಾಜನಗರ: ಬೆಕ್ಕನ್ನು ಸಾಕು ಪ್ರಾಣಿಯಾಗಿ ಎಲ್ಲರ ಮನೆಯಲ್ಲಿ ಸಾಕುವುದು ವಾಡಿಕೆ. ಆದರೆ ಇಲ್ಲೊಂದು ದಂಪತಿ ತಮ್ಮ ಮನೆಯಲ್ಲಿರುವ ಬೆಕ್ಕಿಗೆ ಸೀಮಂತ ಶಾಸ್ತ್ರ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಶಿಕ್ಷಕರು ಆಗಿರುವ ವೆಂಕಟರಮಣ ಶೆಟ್ಟಿ ಹಾಗೂ ಪತ್ನಿ ನಿರ್ಮಲಾ  ದಂಪತಿ ಈ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಮಗಳಿಲ್ಲ ಎಂಬ ಕೊರಗನ್ನು ನೀಗಿಸಲು ಬೆಕ್ಕುನ್ನು ಸಾಕಿದ್ದರು. ಆ ಬೆಕ್ಕಿಗೆ ತಮ್ಮ ಮನೆಯ ಸದಸ್ಯನ ಸ್ಥಾನವನ್ನು ನೀಡಿದ್ದಾರೆ.  ಇದೀಗ ಬೆಕ್ಕು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮನೆಯ ಮಂದಿ ಹೆಣ್ಣು ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಿಕ್ಷಕ ವೆಂಕಟರಮಣ ಶೆಟ್ಟಿ ” ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರೀತಿಯಿಂದ ಹೆಣ್ಣು ಬೆಕ್ಕನ್ನು ಸಾಕಿ ಅದಕ್ಕೆ ಪ್ರೀತಿಯಿಂದ ಸುಬ್ಬಿ ಎಂದು ಹೆಸರಿಡಲಾಗಿದೆ. ಪ್ರತಿನಿತ್ಯ ಅದಕ್ಕೆ ಇಷ್ಟವಾದ ತಿನಿಸನ್ನು ಕೊಟ್ಟು ಸ್ನಾನ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದೆವೆ ಎಂದು ತಿಳಿಸಿದರು.

Join Whatsapp
Exit mobile version