ಮಂಗಳೂರು : ಮಂಗಳೂರಿನ ಸೂಪರ್ ಮಾರ್ಕೆಟ್ ಒಂದರಲ್ಲಿ ಮಾಸ್ಕ್ ಧರಿಸದೇ ಖರೀದಿಗೆಂದು ಬಂದಿದ್ದ ಮಂಗಳೂರಿನ ಖ್ಯಾತ ವೈದ್ಯರಾಗಿರುವ ಡಾ. ಶ್ರೀನಿವಾಸ ಕಕ್ಕಿಲಾಯರವರು ಅಲ್ಲಿನ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿರುವ ಸಿಸಿಟಿವಿ ದೃಶ್ಯವೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ವೈದ್ಯರ ವಿರುದ್ಧ ಸಾಂಕ್ರಾಮಿಕ ತಡೆ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಸೂಪರ್ ಮಾರ್ಕೆಟಿನ ಸಿಬ್ಬಂದಿ ರಿಯಾನ್ ರೊಝಾರಿಯೋ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಲು ಆಗಮಿಸಿದ್ದ ವೈದ್ಯ ಡಾ.ಕಕ್ಕಿಲಾಯ ಅವರೊಂದಿಗೆ ಮಾಸ್ಕ್ ಧರಿಸದೇ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದ ಸೂಪರ್ ಮಾರ್ಕೆಟ್ ಸಿಬ್ಬಂದಿಯೊಂದಿಗೆ ನಾನು ಮಾಸ್ಕ್ ಧರಿಸೋದೇ ಇಲ್ಲ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಫಾಲೋ ಮಾಡುವುದಿಲ್ಲ. ನಾನು ವಿಜ್ಞಾನ ಏನ್ ಹೇಳುತ್ತೋ ಅದನ್ನಷ್ಟೇ ಪಾಲಿಸ್ತೇನೆ ಎಂದು ಕಕ್ಕಿಲ್ಲಾಯ ವಾದ ಮಾಡಿದ್ದರು.
ಡಾ.ಶ್ರೀನಿವಾಸ ಕಕ್ಕಿಲಾಯ ಅವರು ಕಳೆದ 28 ವರ್ಷಗಳಿಂದ ಮಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.