Home ಟಾಪ್ ಸುದ್ದಿಗಳು ಅಮಾನ್ಯಗೊಂಡ ಬಳಿಕವೂ ಹುದ್ದೆ ಮುಂದುವರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

ಅಮಾನ್ಯಗೊಂಡ ಬಳಿಕವೂ ಹುದ್ದೆ ಮುಂದುವರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಹುದ್ದೆಯಲ್ಲಿ ಕಾನೂನುಬಾಹಿರವಾಗಿ ಮುಂದುವರಿದಿದ್ದಾರೆ ಎಂಬ ಆರೋಪದಡಿಯಲ್ಲಿ ಬಿಜೆಪಿ ನಾಯಕ ಹಾಗೂ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಎಚ್‌ಡಿಸಿಎಲ್) ಇದರ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕಂಪೆನಿಯ ಅಥವಾ ಸಂಸ್ಥೆಯ ಕಾಯಿದೆಯ ಪ್ರಕಾರ, ವಿಶಿಷ್ಟ ಗುರುತಿನ ಸಂಖ್ಯೆ (DIN) ಅಮಾನ್ಯಗೊಂಡ ಬಳಿಕ ಅಧ್ಯಕ್ಷರ ಅಥವಾ ನಿರ್ದೇಶಕರ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿರುತ್ತಾರೆ. ಆದರೆ ರಾಘವೇಂದ್ರ ಶೆಟ್ಟಿ ಅವರು ಕಾನೂನುಬಾಹಿರವಾಗಿ ಮುಂದುವರೆದಿದ್ದಾರೆ.

ರಾಘವೇಂದ್ರ ಶೆಟ್ಟಿ ಅವರು ತಮ್ಮ ಡಿಐಎನ್‌ ಅಮಾನ್ಯವಾಗಿರುವ ವಿಚಾರವನ್ನು ಸರ್ಕಾರಕ್ಕೆ ಮರೆಮಾಚಿದ್ದು, ಒಂದೂವರೆ ವರ್ಷಗಳ ಕಾಲ ನಗರಸಭೆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಆರೋಪಿಸಲಾಗಿದೆ.

Join Whatsapp
Exit mobile version