ನಕಲಿ ದಾಖಲೆ ಸೃಷ್ಟಿಸಿ 10 ವರ್ಷ ಸಬ್ ಇನ್ಸ್ ಪೆಕ್ಟರ್ ಆಗಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

Prasthutha|

ಮುಜಾಫರ್ ನಗರ : ನಕಲಿ ದಾಖಲೆಗಳ ಮೂಲಕ ಪೊಲೀಸ್ ಕೆಲಸ ಗಿಟ್ಟಿಸಿಕೊಂಡ ಆರೋಪದ ಮೇಲೆ ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

- Advertisement -


ಕಳೆದ ಹತ್ತು ವರ್ಷಗಳಿಂದ ವಿದೇಶ್ ಕುಮಾರ್ ಪೊಲೀಸ್ ಕೆಲಸದಲ್ಲಿದ್ದು, ಈಗ ಸದ್ಯ ಬುದಾನಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಜಿಲ್ಲಾ ಸರ್ಕಲ್ ಪೊಲೀಸ್ ಅಧಿಕಾರಿ ಶರದ್ ಚಂದ್ ಶರ್ಮಾ ತಿಳಿಸಿದ್ದಾರೆ.


ಪರಿಶಿಷ್ಟ ಜಾತಿಗೆ ಸೇರಿದ ನಕಲಿ ಸರ್ಟಿಫಿಕೇಟ್ ನೀಡಿ ಹಿಂದುಳಿದ ವರ್ಗದ ಇವರು ಕೆಲಸ ಗಿಟ್ಟಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.ಅಲ್ಲದೆ ಅಲಿಘಡದ ಅವರು ತನ್ನ ಊರನ್ನು ಸಹ ಬುಲಂದ್ ಶಹರ್ ಎಂದು ಸುಳ್ಳು ಮಾಹಿತಿ ನೀಡಿದ್ದರು ಎಂದೂ ಸರ್ಕಲ್ ಅಧಿಕಾರಿ ತಿಳಿಸಿದರು.
ಆರೋಪಗಳಲ್ಲಿ ಸತ್ಯಾಂಶ ಕಂಡು ಬಂದುದರಿಂದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ವಿದೇಶ್ ಕುಮಾರ್ ವಿರುದ್ಧ ಮೊಕದ್ದಮೆ ದಾಖಲೆ ಮಾಡಿಕೊಳ್ಳಲಾಗಿದೆ.

Join Whatsapp
Exit mobile version