Home ಟಾಪ್ ಸುದ್ದಿಗಳು ಕ್ಯಾಪ್ಟನ್‌ ಹನುಮಂತ ಅಚ್ಚರಿಯ ನಿರ್ಧಾರ: ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

ಕ್ಯಾಪ್ಟನ್‌ ಹನುಮಂತ ಅಚ್ಚರಿಯ ನಿರ್ಧಾರ: ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

‘ಬಿಗ್‌ ಬಾಸ್‌ ಕನ್ನಡ 11’ರ ಆಟ ಇನ್ನೂ ಒಂದು ವಾರದಲ್ಲಿ ಮುಗಿಯಲಿದೆ. ಧನರಾಜ್ ಮಾಡಿದ ಒಂದು ತಪ್ಪಿನಿಂದ ಮಿಡ್‌ ವೀಕ್‌ ಎಲಿಮಿನೇಷನ್‌ ರದ್ದಾಗಿದ್ದು, ಹೊಸದಾಗಿ ನಾಮಿನೇಷನ್‌ ಪ್ರತಿಕ್ರಿಯೆ ನಡೆದಿದೆ.

ಇದರಲ್ಲಿ ಹನುಮಂತನ ಅಚ್ಚರಿಯ ನಿರ್ಧಾರದಿಂದ ಮೋಕ್ಷಿತಾ ನಾಮಿನೇಷನ್‌ ಹಾಟ್‌ ಸೀಟ್‌ ನಿಂದ ಬಚಾವ್‌ ಆಗಿದ್ದು, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ಕ್ಯಾಪ್ಟನ್ ಹನುಮಂತನಿಗೆ ಬಿಗ್‌ ಬಾಸ್ ಒಂದು ವಿಶೇಷ ಅಧಿಕಾರ ನೀಡಲಾಯಿತು. ಆಗ ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದರು.

ಮೋಕ್ಷಿತಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್‌ನಿಂದ ಹನುಮಂತ ಬಚಾವ್ ಮಾಡಿದ್ದಾರೆ.

Join Whatsapp
Exit mobile version