Home ಟಾಪ್ ಸುದ್ದಿಗಳು 500 ಕೋಟಿ ಕೊಟ್ಟರೂ ನಮ್ಮ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ: ಎಂ.ಬಿ ಪಾಟೀಲ್

500 ಕೋಟಿ ಕೊಟ್ಟರೂ ನಮ್ಮ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ: ಎಂ.ಬಿ ಪಾಟೀಲ್

ಬೆಂಗಳೂರು: ಮುಡಾ ಪ್ರಕರಣದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಹೈಕೋರ್ಟ್ ನಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ನಗರದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಮುಡಾ ಕೇಸ್ ವಿಚಾರದಲ್ಲಿ ನಿಶ್ಚಿತವಾಗಿ ಗೆಲುವು ಸಿಗಲಿದೆ. ಮುಡಾ ಕೇಸ್ ನಲ್ಲಿ ಏನು ಇಲ್ಲ. ಇದರಲ್ಲಿ ತಪ್ಪು ಆಗಿರೋದು ಮುಡಾದಿಂದ. ಮುಡಾ ಜಮೀನು ಪಡೆದು ಸೈಟ್ ಮಾಡಿದೆ. ಇದೊಂದು ಫಾಲ್ಸ್ ಕೇಸ್, ಕೋರ್ಟ್ ನಲ್ಲಿ ವಜಾ ಆಗುತ್ತದೆ. ಆದಾದ ಮೇಲೆ ಬಿಜೆಪಿ ಅವರಿಗೆ ಅಪಮಾನ ಆಗುತ್ತದೆ ಎಂದಿದ್ದಾರೆ.


ಬಳಿಕ ಬಿಜೆಪಿಯವರ ಆಪರೇಷನ್ ಕಮಲ ಪ್ರಯತ್ನ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಅವರು, 100 ಕೋಟಿ ರೂ. ಅಲ್ಲ 500 ಕೋಟಿ ರೂ. ಕೊಟ್ಟರೂ ನಮ್ಮ ಶಾಸಕರು ಮಾರಾಟ ಆಗೋದಿಲ್ಲ. ಆಪರೇಷನ್ ಕಮಲ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version