Home ಆರೋಗ್ಯ ಸ್ಮಾರ್ಟ್​ಫೋನ್ ಮೂಲಕ ಕ್ಯಾನ್ಸರ್ ಪತ್ತೆ: ಹೈದರಾಬಾದ್ ಸಂಶೋಧಕರ ಆವಿಷ್ಕಾರ

ಸ್ಮಾರ್ಟ್​ಫೋನ್ ಮೂಲಕ ಕ್ಯಾನ್ಸರ್ ಪತ್ತೆ: ಹೈದರಾಬಾದ್ ಸಂಶೋಧಕರ ಆವಿಷ್ಕಾರ

ಹೈದರಾಬಾದ್: ನಾನಾ ಬಗೆಯ ಕ್ಯಾನ್ಸರ್​​ ರೋಗಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಕೆಲವು ರೀತಿಯ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ಕೆಲವು ಮಾರಣಾಂತಿಕವಾಗಿರುತ್ತದೆ. ಕ್ಯಾನ್ಸರ್ ರೋಗವನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚುವುದು ಅತಿ ಮುಖ್ಯವಾಗಿದೆ. ಆಗ ಗುಣಪಡಿಸಬಹುದಾದ ರೋಗಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದೀಗ ಕ್ಯಾನ್ಸರ್​ ರೋಗಗಳ ವಿಧದಲ್ಲಿ ಪ್ರಮುಖವಾಗಿರುವ ಬಾಯಿ ಕ್ಯಾನ್ಸರ್​ನ ಆರಂಭಿಕ ಪತ್ತೆಗಾಗಿ ಹೈದರಾಬಾದ್​ನ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT)ಯ ಸಂಶೋಧಕರು ಡೇಟಾ ಮತ್ತು INAI ಸ್ಮಾರ್ಟ್​ಫೋನ್ ಆಧಾರಿತ ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ (ML) ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.

ಸಂಶೋಧಕರ ಪ್ರಕಾರ, ಈ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಪರಿಹಾರವು ಈಗ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಅಸಹಜ ಗಾಯಗಳ ಆರಂಭಿಕ ಪತ್ತೆಯ ಮೂಲಕ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ವಿವೇಕ್ ತಲ್ವಾರ್ ಮತ್ತು ಡಾ. ಪ್ರಜ್ಞಾ ಸಿಂಗ್ ನೇತೃತ್ವದ ಸಂಶೋಧನೆ ವಿವೇಕ್ ತಲ್ವಾರ್ ಮತ್ತು ಡಾ. ಪ್ರಜ್ಞಾ ಸಿಂಗ್ ಅವರ ಕ್ಯುರೇಟೆಡ್ ಡೇಟಾಬೇಸ್‌ನಿಂದ ಸ್ಮಾರ್ಟ್‌ಫೋನ್ ಆಧಾರಿತ ಚಿತ್ರಗಳನ್ನು ಪಡೆದುಕೊಂಡಿದೆ. ಇದರಲ್ಲಿ ಶೇ. 70ರಷ್ಟು ನಿಖರವಾಗಿ ಕ್ಯಾನ್ಸರ್​ನ ರೋಗ ಲಕ್ಷಣಗಳನ್ನು ಪತ್ತೆಹಚ್ಚಬಹುದಾಗಿದೆ. ಅಲ್ಲದೆ, ಸ್ಮಾರ್ಟ್​ಫೋನ್​ಗಳಲ್ಲಿ ಫೋಟೋ ಕ್ಲಿಕ್ ಮಾಡುವ ಮೂಲಕ ಬಾಯಿಯ ಒಳಗಿನ ಕ್ಯಾನ್ಸರ್ ಲಕ್ಷಣದ ಚಿತ್ರವನ್ನು ಸೆರೆಹಿಡಿಯುತ್ತದೆ.

ಈ ಮೂಲಕ ಹೈದರಾಬಾದ್​ನ ಸಂಶೋಧಕರು ಅದ್ಭುತ ಆವಿಷ್ಕಾರವನ್ನು ಮಾಡಿದ್ದಾರೆ. ಬಾಯಿಯ ಕ್ಯಾನ್ಸರ್ ಪತ್ತೆ ಮಾಡುವ ಸ್ಮಾರ್ಟ್ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಬಾಯಿಯ ಹುಣ್ಣಿನ ಚಿತ್ರಗಳನ್ನು ತೆಗೆದುಕೊಂಡರೆ ಫೋನ್‌ನಲ್ಲಿ ಸ್ಥಾಪಿಸದ AI ಸಾಫ್ಟ್‌ವೇರ್ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತದೆ. ಕ್ಯಾನ್ಸರ್ ಇದೆಯೇ? ಅಥವಾ ಇಲ್ಲವೇ? ಎಂಬುದನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡುತ್ತದೆ.

ಈ ಸಾಫ್ಟ್​ವೇರ್ ಕ್ಯಾನ್ಸರ್ ಮೊದಲ ಹಂತದಲ್ಲಿದೆಯೇ? ಕ್ಯಾನ್ಸರ್ ಲಕ್ಷಣಗಳು ಗಂಭೀರವಾಗಿದೆಯೇ? ಎಂಬುದನ್ನು ಕೂಡ ತಿಳಿಸುತ್ತದೆ. ಈ ಬಗ್ಗೆ ಡೇಟಾ ನೀಡುತ್ತದೆ. ದೇಶಾದ್ಯಂತ ಅನೇಕ ಜನರು ಬಾಯಿಯ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿಯೇ ಇಲ್ಲ. ಹೀಗಾಗಿ, ಈ ಸಾಧನವು ಹೆಚ್ಚು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಸ್ಮಾರ್ಟ್ ಫೋನ್ ಮೂಲಕ ಬಾಯಿಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ಪಡೆಯಬಹುದಾಗಿದೆ.

Join Whatsapp
Exit mobile version