Home ಟಾಪ್ ಸುದ್ದಿಗಳು ಕೆನಡಾ: ಭೀಕರ ಚಳಿಗೆ ಮಗು ಸೇರಿದಂತೆ ನಾಲ್ವರು ಭಾರತೀಯರ ಸಾವು

ಕೆನಡಾ: ಭೀಕರ ಚಳಿಗೆ ಮಗು ಸೇರಿದಂತೆ ನಾಲ್ವರು ಭಾರತೀಯರ ಸಾವು

ಸಾಂದರ್ಭಿಕ ಚಿತ್ರ

ಟೊರೊಂಟೊ: ಕೆನಡಾದಲ್ಲಿ ಭೀಕರ ಚಳಿಗೆ ಸಿಲುಕಿ ಮಗು ಸೇರಿದಂತೆ ನಾಲ್ವರು ಭಾರತೀಯರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೆನಡಾ-ಅಮೆರಿಕ ಗಡಿಯ ಬಳಿಯ ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಮಗು ಸೇರಿದಂತೆ ನಾಲ್ವರ ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದ್ದು, ಅವರೆಲ್ಲರೂ ಭಾರತೀಯರು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿರುವುದಾಗಿ ಇಲ್ಲಿನ ಭಾರತದ ಹೈಕಮಿಷನ್ ತಿಳಿಸಿದೆ.

ಕೆನಡಾದ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಮೃತರನ್ನು ಜಗದೀಶ್ ಬಲದೇವ್ಭಾಯ್ ಪಟೇಲ್ (39), ವೈಶಾಲಿಬೆನ್ ಜಗದೀಶ್ಕುಮಾರ್ ಪಟೇಲ್ (37), ವಿಹಂಗಿ ಜಗದೀಶ್ಕುಮಾರ್ ಪಟೇಲ್ (11), ಧಾರ್ಮಿಕ್ ಜಗದೀಶ್ಕುಮಾರ್ ಪಟೇಲ್ (3) ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

Join Whatsapp
Exit mobile version