Home ಟಾಪ್ ಸುದ್ದಿಗಳು ಕೇಂಬ್ರಿಜ್ ವಿವಿ ಭಾಷಣ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಬಿಜೆಪಿ ನಾಯಕನ ಅರ್ಜಿ ವಜಾ

ಕೇಂಬ್ರಿಜ್ ವಿವಿ ಭಾಷಣ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಬಿಜೆಪಿ ನಾಯಕನ ಅರ್ಜಿ ವಜಾ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದ ಸಂಬಂಧ ಎಫ್’ಐಆರ್ ದಾಖಲಿಸುವಂತೆ ಕೋರಿ ಬಿಜೆಪಿ ಸದಸ್ಯ ಮತ್ತು ವಕೀಲ ಶಶಾಂಕ್ ಶೇಖರ್ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ನ್ಯಾಯಾಲಯವು ವಜಾ ಮಾಡಿದೆ.


ರಾಹುಲ್ ಭಾಷಣವು ವಿಭಜನಕಾರಿ ಮತ್ತು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದರು.


ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ), 147 (ಗಲಭೆ ಸೃಷ್ಟಿ), 153ಎ (ದ್ವೇಷ ಹರಡುವುದು), 295ಎ (ದುರುದ್ದೇಶಪೂರಿತ ಕೃತ್ಯ), 295 (ಪೂಜಾ ಸ್ಥಳಕ್ಕೆ ಹಾನಿ) ಅಡಿ ಪ್ರಕರಣ ದಾಖಲಿಸಲು ಕೋರಲಾಗಿತ್ತು. ಆದರೆ ನ್ಯಾಯಾಧೀಶರಾದ ಉಜ್ವಲ್ ಉಪಾಧ್ಯಾಯ ಅವರು ವಜಾ ಮಾಡಿದ್ದು, ಸಂವಿಧಾನದ 19(1)(ಎ) ಅಡಿ ದೊರೆತಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗಳು ಒಳಪಡಲಿವೆ ಎಂದು ಹೇಳಿದ್ದಾರೆ.

Join Whatsapp
Exit mobile version