Home ಟಾಪ್ ಸುದ್ದಿಗಳು ಮೇ 27 ರಂದು ಸಚಿವಾಲಯ ಬಂದ್ ಮಾಡಲು ಕರೆ

ಮೇ 27 ರಂದು ಸಚಿವಾಲಯ ಬಂದ್ ಮಾಡಲು ಕರೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಸಚಿವಾಲಯ ನೌಕರರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27 ರಂದು ಸ್ವಯಂಪ್ರೇರಣೆಯಿಂದ ಸಚಿವಾಲಯದ ಅಧಿಕಾರಿ, ನೌಕರರು ಕಚೇರಿಗೆ ಗೈರು ಹಾಜರಾಗುವ ಮೂಲಕ ಸಚಿವಾಲಯ ಸೇವೆಯನ್ನು ಸ್ಥಗಿತಗೊಳಿಸಿ ಬಂದ್ ಮಾಡಲು ಕರೆ ನೀಡಿದೆ.

ಸಚಿವಾಲಯ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮೇ 23 ರಂದು ಮಧ್ಯಾಹ್ನ 1:30 ಕ್ಕೆ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸರ್ವ ಸದಸ್ಯರ ತುರ್ತು ಸಭೆಯನ್ನು ಕರೆಯಲಾಗಿದೆ.

ಸಚಿವಾಲಯದ ಸಂರಚನೆಯನ್ನು ಉಳಿಸುವ, ಸಚಿವಾಲಯ ನೌಕರರ ವಿರೋಧಿ ಧೋರಣೆಯನ್ನು ಕೈ ಬಿಡುವ ಮತ್ತು ಸರ್ಕಾರದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ವಿರೋಧಿ ನಿಲುವನ್ನು ವಿರೋಧಿಸಿ, ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದರೂ ಸರ್ಕಾರವು ಈ ಬಗ್ಗೆ ಯಾವುದೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಂಘದ ಅಧ್ಯಕ್ಷ ಗುರುಸ್ವಾಮಿ ಆರೋಪಿಸಿದ್ದಾರೆ.

ಅಲ್ಲದೆ, ಸಚಿವಾಲಯದ ನೌಕರರ ಸಂಘವನ್ನು ಸಭೆಗೆ ಆಹ್ವಾನಿಸಿಲ್ಲ. ಆದುದರಿಂದ, ಮೇ 27 ರಂದು ಸಚಿವಾಲಯದ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವಾಲಯ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಸಂಘದ ಹೋರಾಟವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಸಲಹೆ, ಅಭಿಪ್ರಾಯಗಳನ್ನು ಹಾಗೂ ಅವರ ಜವಾಬ್ದಾರಿಗಳನ್ನು ತಿಳಿಸಲು ಮೇ 23 ರಂದು ಸಭೆ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version