Home ಟಾಪ್ ಸುದ್ದಿಗಳು ನಟಿ ಹನಿ ರೋಸ್​ ಬಗ್ಗೆ ಡಬಲ್​ ಮೀನಿಂಗ್​ ಮಾತು: ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸ್ ವಶಕ್ಕೆ..!

ನಟಿ ಹನಿ ರೋಸ್​ ಬಗ್ಗೆ ಡಬಲ್​ ಮೀನಿಂಗ್​ ಮಾತು: ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸ್ ವಶಕ್ಕೆ..!

ಮಲಯಾಳಂ ನಟಿ ಹನಿರೋಸ್ ನೀಡಿದ ದೂರಿನ ಮೇರೆಗೆ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್​ ಅವರನ್ನು ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಯನಾಡ್​ ನಲ್ಲಿದ್ದ ಬಾಬಿ ಚೆಮ್ಮನೂರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಹನಿ ರೋಸ್ ನೀಡಿದ ದೂರಿನ ಮೇರೆಗೆ ತನಿಖೆಗಾಗಿ ಕೇರಳ ಪೊಲೀಸ್​ ಇಲಾಖೆ ಎರ್ನಾಕುಲಂ ಸೆಂಟ್ರಲ್ ಎಸಿಪಿ ಜಯಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿತ್ತು. ಅಗತ್ಯ ಬಿದ್ದರೆ ತನಿಖಾ ತಂಡವನ್ನು ವಿಸ್ತರಿಸಲಾಗುವುದು ಎಂದು ಕೊಚ್ಚಿ ಪೊಲೀಸರು ಮಾಹಿತಿ ನೀಡಿದ್ದರು. ಬಾಬಿ ಚೆಮ್ಮನೂರ್ ಅವರಿಗೆ ನೋಟಿಸ್ ಸಹ ಜಾರಿ ಮಾಡಿತ್ತು. ಇದೀಗ ವಯನಾಡಿನಲ್ಲಿ ಉದ್ಯಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ಹನಿ ರೋಸ್ ದೂರು ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ವೇದಿಕಗಳಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ಹನಿ ರೋಸ್​ ಆರೋಪಿಸಿದ್ದರು. ಬಾಬಿ ಚೆಮ್ಮನೂರ್ ಅವರೇ ನನ್ನ ವಿರುದ್ಧ ನೀವು ಮಾಡಿದ ನಿರಂತರ ಅಶ್ಲೀಲ ನಿಂದನೆಗಳ ವಿರುದ್ಧ ನಾನು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿಮ್ಮಂತೆಯೇ ಮಾನಸಿಕ ಸ್ಥಿತಿ ಹೊಂದಿರುವ ನಿಮ್ಮ ಸಹಚರರ ವಿರುದ್ಧವೂ ದೂರುಗಳು ದಾಖಲಾಗಿವೆ. ನೀವು ನಿಮ್ಮ ಹಣವನ್ನು ನಂಬುತ್ತೀರಿ, ಆದರೆ, ನಾನು ಭಾರತದಲ್ಲಿನ ಕಾನೂನು ವ್ಯವಸ್ಥೆಯನ್ನು ನಂಬುತ್ತೇನೆ ಎಂದು ಹನಿ ರೋಸ್ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದರು.

Join Whatsapp
Exit mobile version