Home ಟಾಪ್ ಸುದ್ದಿಗಳು ಬುಲ್ಲಿ ಬಾಯಿ ಆರೋಪಿಗಳೇ ಸುಲ್ಲಿ ಡೀಲ್ಸ್ ಪ್ರಕರಣದಲ್ಲೂ ಭಾಗಿ । ತನಿಖೆಯಲ್ಲಿ ಬಹಿರಂಗ

ಬುಲ್ಲಿ ಬಾಯಿ ಆರೋಪಿಗಳೇ ಸುಲ್ಲಿ ಡೀಲ್ಸ್ ಪ್ರಕರಣದಲ್ಲೂ ಭಾಗಿ । ತನಿಖೆಯಲ್ಲಿ ಬಹಿರಂಗ

ನವದೆಹಲಿ: ಬುಲ್ಲಿ ಬಾಯಿ ಪ್ರಕರಣದಲ್ಲಿ ಪಾಲ್ಗೊಂಡ ಆರೋಪಿಗಳೇ ಸುಲ್ಲಿ ಡೀಲ್ಸ್ ನಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಎಂಬ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಮುಂಬೈನ ಸೈಬರ್ ಅಪರಾಧ ವಿಭಾಗದ ಸೈಬರ್ ಸೆಲ್ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ದೆಹಲಿ ಪೊಲೀಸರು ಬಂಧಿಸಿರುವ ಬುಲ್ಲಿ ಬಾಯಿ ಆ್ಯಪ್ ಸಂಯೋಜಕ ನಿರಾಜ್ ಬಿಷ್ಣೋಯ್ ಎಂಬಾತನ ನೆರವಿನಿಂದ ಈ ಎಲ್ಲಾ ಆರೋಪಿಗಳು ದುಷ್ಕೃತ್ಯ ಎಸೆದಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಲಾಗಿದೆ.

ಈ ಪ್ರಕರಣದ ಮೂವರು ಆರೋಪಿಗಳು ಪಲಾಯನ ಅಥವಾ ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಯಿರುವುದರಿಂದ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Join Whatsapp
Exit mobile version