Home ಟಾಪ್ ಸುದ್ದಿಗಳು ಜೈಲುಗಳು ಭರ್ತಿ: ಮದ್ಯ ನಿಷೇಧ ಕಠಿಣ ಕಾನೂನು ಸಡಿಲಿಕೆಗೆ ಮುಂದಾದ ಬಿಹಾರ ಸರ್ಕಾರ

ಜೈಲುಗಳು ಭರ್ತಿ: ಮದ್ಯ ನಿಷೇಧ ಕಠಿಣ ಕಾನೂನು ಸಡಿಲಿಕೆಗೆ ಮುಂದಾದ ಬಿಹಾರ ಸರ್ಕಾರ

ಪಾಟ್ನಾ : ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರ ‘ಬಿಹಾರ ನಿಷೇಧ ಕಾನೂನು 2016 ಕಾಯ್ದೆಯ ಕಠಿಣ ನಿರ್ಬಂಧಗಳ ಸಡಿಲಿಕೆಗೆ ಮುಂದಾಗಿದೆ.

ಈ ಸಂಬಂಧ ಅಬಕಾರಿ ಇಲಾಖೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ರಾಜ್ಯ ಗೃಹ ಇಲಾಖೆಯ ಪರಿಶೀಲನೆಗಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ತಿದ್ದುಪಡಿಯ ಕಾಯ್ದೆ ಜಾರಿಯಾದರೆ ಮದ್ಯ ಮಾರಾಟದಲ್ಲಿ ತೊಡಗಿರುವವರಿಗೆ ಹಾಗೂ ಮದ್ಯ ಸೇವನೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್‌ ಸಿಗಲಿದೆ.

ಅಪರಾಧದ ಗಂಭೀರತೆಗೆ ಅನುಗುಣವಾಗಿ ದಂಡ ಅಥವಾ ಜೈಲು ಶಿಕ್ಷೆ ಕಡಿಮೆಗೊಳಿಸಲಾಗುತ್ತದೆ. ಜೊತೆಗೆ ಇಂತಹ ಪ್ರಕರಣಗಳ ವಿಲೇವಾರಿ ಮಾಡಲು ಪ್ರತ್ಯೇಕ ನ್ಯಾಯಾಲಯಗಳ ಸ್ಥಾಪನೆ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಪರಿಹಾರಕ್ಕಾಗಿ ಅವಕಾಶವಿರುತ್ತದೆ ಎಂದು ತಿಳಿದು ಬಂದಿದೆ.

Join Whatsapp
Exit mobile version