Home ಟಾಪ್ ಸುದ್ದಿಗಳು ಭಾರತದ ಬಾಂಗ್ಲಾ ಗಡಿಯಲ್ಲಿ ಹೈಅಲರ್ಟ್ ಘೋಷಿಸಿದ ಬಿಎಸ್’ಎಫ್

ಭಾರತದ ಬಾಂಗ್ಲಾ ಗಡಿಯಲ್ಲಿ ಹೈಅಲರ್ಟ್ ಘೋಷಿಸಿದ ಬಿಎಸ್’ಎಫ್

ನವದೆಹಲಿ: ಬಾಂಗ್ಲಾದೇಶದಲ್ಲಿ ಕ್ಷಿಪ್ರ ದಂಗೆ ಹಿನ್ನೆಲೆಯಲ್ಲಿ 4,096 ಕಿ.ಮೀ ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆಯು(ಬಿಎಸ್ಎಫ್) ಹೈ ಅಲರ್ಟ್ ಘೋಷಿಸಿದೆ.


ಪರಿಸ್ಥಿತಿ ಕುರಿತಂತೆ ಅವಲೋಕನ ನಡೆಸಲು ಬಿಎಸ್ ಎಫ್ ಡಿಜಿ ದಲ್ಜಿತ್ ಸಿಂಗ್ ಚೌಧರಿ ಮತ್ತು ಇತರೆ ಹಿರಿಯ ಅಧಿಕಾರಿಗಳು ಕೋಲ್ಕತ್ತಗೆ ಬಂದಿದ್ದಾರೆ ಎಂದು ಬಿಎಸ್ ಎಫ್ ತಿಳಿಸಿದೆ.


ಎಲ್ಲ ಸಿಬ್ಬಂದಿಯನ್ನು ಕೂಡಲೇ ಗಡಿ ಭದ್ರತೆಗೆ ನಿಯೋಜಿಸುವಂತೆ ಎಲ್ಲ ಫೀಲ್ಡ್ ಕಮಾಂಡರ್ಗಳಿಗೆ ಡಿಜಿ ನಿರ್ದೇಶನ ನೀಡಿದ್ದಾರೆ.

Join Whatsapp
Exit mobile version