ಖುಷಿನಗರ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಸೋಲಿಗೆ ಖರ್ಗೆ ಅವರನ್ನು ದೂಷಿಸುತ್ತಾರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಬಚಾವ್ ಆಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕುಶಿನಗರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಮೊದಲ ಐದು ಹಂತಗಳ ವಿವರ ನನ್ನ ಬಳಿ ಇದೆ. ಲೋಕಸಭೆ ಚುನಾವಣೆಯ ಐದು ಹಂತಗಳಲ್ಲಿ ಪ್ರಧಾನಿ ಮೋದಿ 310 ಸ್ಥಾನಗಳನ್ನು ದಾಟಿದ್ದಾರೆ. ಜೂನ್ 4 ರಂದು ರಾಹುಲ್ 40 ಮತ್ತು ಅಖಿಲೇಶ್ ಯಾದವ್ 4 ಸ್ಥಾನಗಳನ್ನು ಸಹ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಜೂನ್ 4 ರಂದು ಮಧ್ಯಾಹ್ನ ರಾಹುಲ್ ಬಾಬಾರವರು ಪತ್ರಿಕಾಗೋಷ್ಠಿ ನಡೆಸಿ ಇವಿಎಂಗಳಿಂದಾಗಿ ಸೋತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ನಷ್ಟದ ಹೊಣೆ ಖರ್ಗೆಯವರ ಮೇಲೂ ಬೀಳಲಿದೆ ಎಂದಿದ್ದಾರೆ.