Home ಟಾಪ್ ಸುದ್ದಿಗಳು ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದವರು: ಅವರನ್ನು ಇಲ್ಲಿಂದ ಓಡಿಸಬೇಕು ಎಂದ ಆರ್’ಜೆಡಿ ನಾಯಕ

ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದವರು: ಅವರನ್ನು ಇಲ್ಲಿಂದ ಓಡಿಸಬೇಕು ಎಂದ ಆರ್’ಜೆಡಿ ನಾಯಕ

ನಿರ್ಮಲಿ: ಬ್ರಾಹ್ಮಣರು ಭಾರತದವರಲ್ಲ ರಷ್ಯಾದಿಂದ ಬಂದವರು ಎಂದು ಆರ್ ಜೆಡಿ ನಾಯಕ ಯದುವಂಶ ಕುಮಾರ್ ಯಾದವ್ ಹೇಳಿದ್ದಾರೆ.

ನಿರ್ಮಲಿ ಜಿಲ್ಲೆಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಬ್ಬ ಬ್ರಾಹ್ಮಣನೂ ಭಾರತಕ್ಕೆ ಸೇರಿದವರಲ್ಲ ಎಂದು ಹೇಳಿದ್ದು, ಅವರೆಲ್ಲರೂ ರಷ್ಯಾ ಇತರೆ ದೇಶಗಳಿಂದ ಬಂದವರು, ಅವರನ್ನು ರಷ್ಯಾದಿಂದ ಗಡಿ ಪಾರು ಮಾಡಲಾಗಿತ್ತು ನಂತರ ಅವರೆಲ್ಲರೂ ಭಾರತಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.


ನಮ್ಮನ್ನೆಲ್ಲಾ ಒಡೆದು ನಾವು ಹೊಡೆದಾಡುವಂತೆ ಮಾಡುತ್ತಿದ್ದಾರೆ, ನಮ್ಮ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ.

Join Whatsapp
Exit mobile version