Home ಟಾಪ್ ಸುದ್ದಿಗಳು ಪುರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಪೆಟ್ರೋಲ್ ಹಾಕುವ ಹುಡುಗ

ಪುರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಪೆಟ್ರೋಲ್ ಹಾಕುವ ಹುಡುಗ

ಯಾದಗಿರಿ: ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಯುವಕನೋರ್ವ ಗೆಲುವು ಸಾಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ವಾರ್ಡ್ ನಂ6ರಲ್ಲಿ ಪೆಟ್ರೋಲ್ ಬಂಕ್ ನೌಕರ ಪರಶುರಾಮ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಯುವಕ ಪರಶುರಾಮ ತಮ್ಮ ವಿರುದ್ಧ ಸ್ಪರ್ಧಿಸಿದ್ದ 50 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

ಕಕ್ಕೇರಾ ಪುರಸಭೆಯಲ್ಲಿ ಶೇ 76.68 ಮತ್ತು ಕೆಂಭಾವಿ ಪುರಸಭೆಯಲ್ಲಿ ಶೇ 72.17 ಮತದಾನವಾಗಿತ್ತು. ಕಕ್ಕೇರಾ ‍ಪುರಸಭೆಗೆ 51 ಮಂದಿ ಸ್ಪರ್ಧಿಸಿದ್ದರು. ಈ 51 ಮಂದಿಯಲ್ಲಿ ಪೆಟ್ರೋಲ್ ಬಂಕ್ ನೌಕರ ಪರುಶುರಾಮ ಕೂಡ ಇದ್ದರು.

Join Whatsapp
Exit mobile version