ಮೀಯಪದವು: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೊಬ್ಬ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಇದಕ್ಕೆ ಕಾರಣರಾದ KSEB ವರ್ಕಾಡಿಯ ಅಧಿಕಾರಿಗಳ ವಿರುಧ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು SDPI ಮಂಜೇಶ್ಚರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಆಗ್ರಹಿಸಿದ್ದಾರೆ.
GLP ತಲೇಕಳ ಶಾಲೆಯ 4ನೇ ತರಗತಿ ವಿದ್ಯಾರ್ಥಿ, ಮೂಲತಃ ಮುರತ್ತಣೆ ಲಕ್ಷಂವೀಡ್ ಕಾಲನಿಯ ಸದಾಶಿವ ರೈ ಎಂಬವರ ಮಗ ಮೋಕ್ಷಿತ್ ರೈ ( 8 ವರ್ಷ) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಇದಕ್ಕೆ KSEB ವರ್ಕಾಡಿಯ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವರ್ಷಗಳ ಹಿಂದೆ ವರ್ಕಾಡಿಯಲ್ಲಿ 6 ಮಕ್ಕಳು ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟು ಇಡೀ ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದ್ದು ಮಕ್ಕಳನ್ನು ಕಳೆದುಕೊಂಡ ಆ ನತದೃಷ್ಟ ಕುಟುಂಬ ಇಂದಿಗೂ ಘಟನೆಯನ್ನು ನೆನೆದು ಕಣ್ಣೀರುಡುವಾಗ ಮತ್ತೆ ಅದೇ ಘಟನೆ ಮರುಕಳಿಸಿದ್ದು KSEB ಅಧಿಕಾರಿಗಳ ಬೇಜವಾಬ್ದಾರಿತನಕ್ಕಿರುವ ಸ್ಷಷ್ಟ ಉದಾಹರಣೆಯಾಗಿದೆ. ಮೃತಪಟ್ಟ ಬಾಲಕನ ಕುಟುಂಬಕ್ಕೆ ನಷ್ಟ ಪರಿಹಾರವನ್ನು ಕೂಡಲೇ ಹಸ್ತಾಂತರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಬಂಧಿಸಬೇಕೆಂದು ಅಶ್ರಫ್ ಒತ್ತಾಯಿಸಿದ್ದಾರೆ.