ಕಣಜ ಹುಳು ಕಡಿದು ಬಾಲಕ ಸಾವು

Prasthutha|

ಮಂಗಳೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಕಣಜ ಹುಳು ಕಡಿದು 12 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಬಿಸಿರೋಡ್ ಸಮೀಪದ ಕಲಾಯಿ ಎಂಬಲ್ಲಿ ನಡೆದಿದೆ.

- Advertisement -

ಕಲಾಯಿ ಅಮ್ಮುಂಜೆ ನಿವಾಸಿ ಹಕೀಂ ಕಲಾಯಿ ಅವರ 12 ವರ್ಷ ಪ್ರಾಯದ ಮಾಝಿನ್ ಮೃತ ಬಾಲಕ.

ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭ ಬಾಲಕನ ಮೇಲೆ ಕಣಜ ನೊಣ ದಾಳಿ ಮಾಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಉನ್ನತ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Join Whatsapp
Exit mobile version