ಬೆಂಗಳೂರು: 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ ಸನ್ನಿ’ ಯನ್ನು ನೆನಪಿಸಿಕೊಂಡು ಭಾವುಕರಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ ಕಾಂಗ್ರೆಸ್ ಸಿನಿಮಾಗೆ ಮಾತ್ರ ಬೊಮ್ಮಾಯಿ ಕಣ್ಣೀರು, ಬಡವರ ಹೊಟ್ಟೆಗೆ ತಣೀರು ಎಂದು ಹೇಳಿದೆ.
ರಾಜ್ಯದ ಸಿಎಂ ಅವರನ್ನು ಸಿನಿಮಾ ಮಾಸ್ಟರ್ ಎಂದು ಕರೆಯುವುದು ಸೂಕ್ತವೇನೋ ಎಂದೂ ಕಾಂಗರೆಸ್ ಹೇಳಿದೆ. ಸಿಎಂ ಸಿನೆಮಾ ನೋಡಿ ಕಣ್ಣೀರು ಹಾಕುವ ಭಾವುಕತೆ ಮೆಚ್ಚುವಂತದ್ದೇ. ಆದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ, ರಾಜ್ಯದ ಜನರ ಸಂಕಷ್ಟ ಅನುಭವಿಸಿದಾಗ, ಮಂಡ್ಯದಲ್ಲಿ ವೈದ್ಯಕೀಯ ಅವ್ಯವಸ್ಥೆ ನೋಡಿದಾಗ ಅವರ ಭಾವುಕತೆ ಮರೆಯಾಗಿಬಿಡುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.