Home ಗಲ್ಫ್ ಸೋನು ನಿಗಮ್ ಗೆ ಯುಎಇ ಗೋಲ್ಡನ್ ವೀಸಾ

ಸೋನು ನಿಗಮ್ ಗೆ ಯುಎಇ ಗೋಲ್ಡನ್ ವೀಸಾ

ದುಬೈ: ಬಾಲಿವುಡ್ ಸಂಗೀತಗಾರ ಸೋನು ನಿಗಮ್ ಗೆ ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡಿ ಪುರಸ್ಕರಿಸಿದೆ. ಗೋಲ್ಡನ್ ವೀಸಾ ನೀಡಿದ ಯುಎಇ ಸರ್ಕಾರಕ್ಕೆ ಸೋನು ನಿಗಮ್ ಅಭಿನಂದನೆ ಸಲ್ಲಿಸಿದ್ದು, ಕಳೆದ 27 ವರ್ಷಗಳಿಂದ ಯುಎಇ ಯಲ್ಲಿ ವಾಸಿಸುತ್ತಿರುವ ತನಗೆ ಯುಎಇ ಎರಡನೇ ತವರು ಇದ್ದಂತೆ ಅವರು ಬಣ್ಣಿಸಿದ್ದಾರೆ.

ದುಬೈಯಲ್ಲಿ ಡ್ಯಾನ್ಯೂಬ್ ಸಂಸ್ಥೆಯ ಮುಖ್ಯಸ್ಥರಾಗಿರುವ ಸಹೋದರ ರಿಝ್ವಾನ್ ಸಜ್ಜಾನ್ ಅವರಿಗೆ ಧನ್ಯವಾದ ಸಲ್ಲಿಸಿದ ಸೋನು ನಿಗಮ್ ದುಬೈ ತನ್ನ ಅಚ್ಚುಮೆಚ್ಚಿನ ತಾಣವೆಂದು ಉಲ್ಲೇಖಿಸಿದ್ದಾರೆ.

ಈ ಹಿಂದೆ ಮುಸ್ಲಿಮರು ಬೆಳಗ್ಗಿನ ಜಾವ ಮೊಳಗಿಸುವ ಆಝಾನ್ ನಿಂದ ತನಗೆ ಕಿರಿಕಿರಿ ಆಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

Join Whatsapp
Exit mobile version