Home ಟಾಪ್ ಸುದ್ದಿಗಳು ಇನ್ ಸ್ಟಾಗ್ರಾಂ ಹಿಂಬಾಲಕರ ಪಟ್ಟಿಯಲ್ಲಿ ಮೋದಿಯನ್ನು ಹಿಂದಿಕ್ಕಿದ ಬಾಲಿವುಡ್ ನಟಿ

ಇನ್ ಸ್ಟಾಗ್ರಾಂ ಹಿಂಬಾಲಕರ ಪಟ್ಟಿಯಲ್ಲಿ ಮೋದಿಯನ್ನು ಹಿಂದಿಕ್ಕಿದ ಬಾಲಿವುಡ್ ನಟಿ

ಬೆಂಗಳೂರು: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಿದ್ದಾರೆ.


ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರದ್ಧಾ ಕಪೂರ್ ಅವರಿಗೆ 9.14 ಕೋಟಿ ಹಿಂಬಾಲಕರಿದ್ದು, ಪ್ರಧಾನಿ ಮೋದಿ 9.13 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಭಾರತದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ.


ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನ್ಸ್ ಅವರು ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯರಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. ವಿರಾಟ್ ಗೆ 27.1 ಕೊಟಿ ಹಾಗೂ ಪ್ರಿಯಾಂಕಾ ಚೋಪ್ರಾ ಅವರಿಗೆ 9.18 ಕೋಟಿ ಹಿಂಬಾಲಕರಿದ್ದಾರೆ.

Join Whatsapp
Exit mobile version