ರೈಲ್ವೆ ಹಳಿ ಮೇಲೆ ಗುಪ್ತಚರ ಬ್ಯೂರೋ ಮಹಿಳಾ ಅಧಿಕಾರಿ ಶವ ಪತ್ತೆ!

- Advertisement -

ತಿರುವನಂತಪುರಂ: ನಗರದ ಚಕ್ಕಾ ಪ್ರದೇಶದ ಬಳಿಯ ರೈಲ್ವೆ ಹಳಿಯ ಮೇಲೆ ಗುಪ್ತಚರ ಬ್ಯೂರೋದ ಮಹಿಳಾ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ.

- Advertisement -

ಮೃತ ಅಧಿಕಾರಿಯನ್ನು ಮೇಘಾ (24) ಎಂದು ಗುರುತಿಸಲಾಗಿದೆ. ಮಾ.24ರ ಬೆಳಿಗ್ಗೆ 9:30ರ ಸುಮಾರಿಗೆ ಅವರ ಶವ ಪತ್ತೆಯಾಗಿದೆ. ಮೇಘಾ ಅವರು ಮೂಲತಃ ಪತನಂತಿಟ್ಟ ಜಿಲ್ಲೆಯವರು. ಅವರು ಕೇರಳದ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಅವರು ತಮ್ಮ ಪಾಳಿ ಕೆಲಸ ಮುಗಿಸಿ ತೆರಳಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

- Advertisement -


Must Read

Related Articles