Home ಕರಾವಳಿ ಮಂಗಳೂರು | ಮಗುಚಿಬಿದ್ದ ಮೀನುಗಾರಿಕೆ ಬೋಟ್; 6 ಮಂದಿ ನಾಪತ್ತೆ

ಮಂಗಳೂರು | ಮಗುಚಿಬಿದ್ದ ಮೀನುಗಾರಿಕೆ ಬೋಟ್; 6 ಮಂದಿ ನಾಪತ್ತೆ

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮಂಗಳೂರಿನ ಬೋಳಾರದ ಬೋಟೊಂದು ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿ, ಬೋಟ್ ವಾಪಸ್ ಬರುವಾಗ ಮುಳುಗಡೆಯಾಗಿದೆ ಎನ್ನಲಾಗಿದೆ.

ದೋಣಿಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 16 ಮಂದಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಆಗಮಿಸಿದೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯೊಂದು ತಿಳಿಸಿದೆ.  

Join Whatsapp
Exit mobile version