Home ಕರಾವಳಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬೆಳ್ಳಾರೆಯಲ್ಲಿ ರಕ್ತದಾನ ಶಿಬಿರ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬೆಳ್ಳಾರೆಯಲ್ಲಿ ರಕ್ತದಾನ ಶಿಬಿರ

ಸುಳ್ಳ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಬೆಳ್ಳಾರೆ ವಲಯ ಸಮಿತಿಯ ಪದಗ್ರಹಣ ಹಾಗೂ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ರೆಡ್ ಕ್ರಾಸ್ ಸೊಸೈಟಿಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಭಾನುವಾರ ಬೆಳ್ಳಾರೆಯಲ್ಲಿ ನಡೆಯಿತು.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ನೂತನ ಸಮಿತಿಯ ಪದಾಧಿಕಾರಿಗಳ ಘೋಷಣೆ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ನಂತರ ಅವರು, ರಕ್ತದಾನ ಶಿಬಿರ, ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವಲ್ಲಿ ಸಹಕರಿಸುವುದು, ಆರೋಗ್ಯದ ಕುರಿತು ಮಾಹಿತಿ ನೀಡುವ ಮೂಲಕ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಆರೋಗ್ಯವಂತ ಸದೃಢ ಸಮಾಜ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಸಂದೇಶ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಸಮಿತಿಯ ಅಧ್ಯಕ್ಷ ಎಂ.ಆರ್.ರಹೀಮ್ ಬೆಳ್ಳಾರೆ ವಹಿಸಿದ್ದರು. ಲೈಫ್ ಕೇರ್ ಕ್ಲಿನಿಕ್ ನ ವೈದ್ಯರಾದ ಡಾ.ರಿಜ್ವಾನ್, ಎಸ್.ಎಸ್.ಎಫ್. ಬ್ಲಡ್ ಸೈಬೋ ಸಂಘಟಕ ಸಿದ್ದೀಕ್ ಗೂನಡ್ಕ, ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಮುಂತಾದವರು ಮಾತನಾಡಿದರು.


ವೇದಿಕೆಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ಡಾ.ಜಿ.ಎನ್.ಭಟ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೆಳ್ಳಾರೆ ಗೌರವಾಧ್ಯಕ್ಷ ಜನಾಬ್ ನಾಸಿರ್ ಆರಂಡ, ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕೋಶಾಧಿಕಾರಿ ಹಾಜಿ.ಕೆ.ಮಮ್ಮಾಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಕಮ್ಯುನಿಟಿ ಡೆವಲೆಪ್ಮೆಂಟ್ ಉಸ್ತುವಾರಿ ಅಶ್ರಫ್ ಬಾವು, ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಅಧ್ಯಕ್ಷ ಫಾರೂಕ್ ನಿಂತಿಕಲ್, ಎಸ್.ಡಿ.ಪಿ.ಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ನಸೀಮಾ ಹಾರಿಸ್ ಮುಂತಾದವರು ಉಪಸ್ಥಿತರಿದ್ದರು.


ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ ಜನಾಬ್ ಅಯ್ಯೂಬ್ ಅಗ್ನಾಡಿ ಹಾಗೂ ನಾಸಿರ್ ಆರಂಡ ರಕ್ತದಾನ ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಫೀಕ್ ಬೆಳ್ಳಾರೆ ಸ್ವಾಗತಿಸಿ , ಫಾರೂಕ್ ಪಾಜಪಳ್ಳ ವಂದಿಸಿದರು. ಬಶೀರ್ ಕೆ.ಎ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version