ಉತ್ತರ ಕನ್ನಡ: ಬಾಂಬ್ ಸ್ಫೋಟ ಅನ್ನೋದು ಚುನಾವಣೆಗಾಗಿ ಬಿಜೆಪಿಯವರು ಮಾಡಿರೋ ಸಂಚು. ಬಿಜೆಪಿಯವರು ಚುನಾವಣೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ ಎಂದು ಮೀನಿಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಸಂಚು ಮಾಡ್ತಾರೆ. ಸಂಚನ್ನು ಯಾರು, ಯಾವ ಪಕ್ಷದವರು ಮಾಡ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಅದ್ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ಖಂಡಿತವಾಗಿ ಕಠಿಣ ಕ್ರಮ ಜರುಗಿಸುತ್ತದೆ ಎಂದು ಹೇಳಿದರು.
ಬಿಜೆಪಿಯವರು ಇದುವರೆಗೂ ಯಾವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮಾತಾನಾಡಿದ್ದಾರಾ? ಬಿಜೆಪಿಯವರು ಬಡವರ ಪರವಾಗಿ ಯಾವ ಕಾರ್ಯಕ್ರಮ ನೀಡಿ ಚುನಾವಣೆ ಎದುರಿಸಿದ್ದಾರೆ? ಅವರು ಇದುವರೆಗೂ ಇಂತದ್ದೇ ಮಾಡಿಕೊಂಡು ಚುನಾವಣೆ ಎದುರಿಸಿದ್ದಾರೆ. ಅದಕ್ಕೆ ನಾವು ಅವರ ಬಗ್ಗೆ ಮಾತನಾಡೋದಿಲ್ಲ. ಆದರೆ ನಾವು ಮಾತನಾಡಿಲ್ಲ ಎಂದರೇ ಅವರಿಗೆ ಹೆದರಿಕೊಂಡು ಮಾಡುತ್ತಿಲ್ಲ ಅಂತೀರಿ ಎಂದು ಕಿಡಿಕಾರಿದರು.