Home ಕರಾವಳಿ ನನಗೆ ಪ್ರೀತಿಸುವ ಹಕ್ಕಿಲ್ಲವೇ?: ಪೊಲೀಸರಿಗೆ ಇಮೇಲ್ ಸಂದೇಶ ಕಳುಹಿಸಿದ ಚೈತ್ರಾ ಹೆಬ್ಬಾರ್

ನನಗೆ ಪ್ರೀತಿಸುವ ಹಕ್ಕಿಲ್ಲವೇ?: ಪೊಲೀಸರಿಗೆ ಇಮೇಲ್ ಸಂದೇಶ ಕಳುಹಿಸಿದ ಚೈತ್ರಾ ಹೆಬ್ಬಾರ್

ಮಂಗಳೂರು: ಪುತ್ತೂರಿನ ದಿ.ಸತೀಶ್‌ ಹೆಬ್ಬಾರ್‌ ಪುತ್ರಿ ಚೈತ್ರಾ ಹೆಬ್ಬಾರ್‌ ಫೆ.17ರಂದು ಪಿಜಿಯಿಂದ ಹೊರಹೋದಾಕೆ ಕಾಲೇಜಿಗೂ ತೆರಳದೆ ನಾಪತ್ತೆಯಾಗಿದ್ದು, ಆಕೆ ಈಗ ಕತಾರ್ ದೇಶಕ್ಕೆ ಹೋಗಿರುವುದಾಗಿ ತಿಳಿದು ಬಂದಿದೆ. ಅಲ್ಲಿಂದಲೇ ಉಳ್ಳಾಲ ಪೊಲೀಸರಿಗೆ ಆಕೆ ಇಮೇಲ್ ಕಳುಹಿಸಿದ್ದು, ನಾನು ಪ್ರಬುದ್ಧಳಾಗಿದ್ದೇನೆ. ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಸಂದೇಶ ರವಾನಿಸಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.

ನನಗೆ ಯಾವುದೇ, ಯಾರದೇ ಒತ್ತಡವಿಲ್ಲ ಸ್ವಇಚ್ಚೆಯಿಂದ ನನ್ನ ಇಷ್ಟದಂತೆ ನಾನು ಕತಾರ್‌ಗೆ ಬಂದಿದ್ದೇನೆ. ನನಗೆ ಬದುಕುವ ಹಕ್ಕಿಲ್ಲವೇ ಎಂದು ಪೊಲೀಸರಿಗೆ ಕಳುಹಿಸಿರುವ ಮೇಲ್‌ನಲ್ಲಿ ಪ್ರಶ್ನಿಸಿದ್ದಾಳೆ ಎನ್ನಲಾಗಿದೆ.

ಕೋಟೆಕಾರು ಮಾಡೂರು ಬಳಿ ಪಿಜಿಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್‌ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಇತ್ತ ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರೂಕ್ ಮಾಡೂರಿನಲ್ಲಿರುವ ಇವಳ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ ಶಾರೂಕ್‌ನಿಂದಲೇ ಚೈತ್ರಾ ಕತಾರ್ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

ಶಾರೂಕ್‌ ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾರೂಕ್-ಚೈತ್ರಾ ಹೆಬ್ಬಾರ್ ಪ್ರೀತಿ ವಿಚಾರ ಬೆಳಕಿಗೆ ಬಂದಿದೆ. ತಾನು ಚೈತ್ರಾ ಹೆಬ್ಬಾರ್ ಪ್ರೀತಿಸುತ್ತಿರುವುದಾಗಿ ಶಾರೂಕ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Join Whatsapp
Exit mobile version