Home ಟಾಪ್ ಸುದ್ದಿಗಳು ತ್ರಿವಳಿ ತಲಾಖ್ ಕಾನೂನನ್ನು ‘ಮಹಿಳಾ ಹಕ್ಕುಗಳ ದಿನ’ವನ್ನಾಗಿ ಆಚರಿಸಲು ಕರೆ ನೀಡಿರುವುದು ಬಿಜೆಪಿಯ ಕಪಟತನಕ್ಕೆ ಸಾಕ್ಷಿ...

ತ್ರಿವಳಿ ತಲಾಖ್ ಕಾನೂನನ್ನು ‘ಮಹಿಳಾ ಹಕ್ಕುಗಳ ದಿನ’ವನ್ನಾಗಿ ಆಚರಿಸಲು ಕರೆ ನೀಡಿರುವುದು ಬಿಜೆಪಿಯ ಕಪಟತನಕ್ಕೆ ಸಾಕ್ಷಿ : NWF ಹೇಳಿಕೆ

ಬೆಂಗಳೂರು,ಆ,2: ಬಿಜೆಪಿ ಸರ್ಕಾರವು ಆಗಸ್ಟ್ 1 ಕ್ಕೆ ‘ಮಹಿಳಾ ಹಕ್ಕು ದಿನ’ ಎಂದು ಆಚರಿಸಲು ಕರೆ ನೀಡಿದೆ. ಈ ಮೂಲಕ ತ್ರಿವಳಿ ತಲಾಖ್ ವಿರುದ್ಧದ ಕಾನೂನಿನ ಯಶಸ್ಸನ್ನು ಬಿಜೆಪಿ ಆಚರಿಸುತ್ತಿದೆ . ಇದು ಬಿಜೆಪಿಯ ಕಪಟತನವಲ್ಲದೆ ಬೇರೇನೂ ಅಲ್ಲ ಎಂದು ಎನ್‌ಡಬ್ಲ್ಯುಎಫ್ ತಿಳಿಸಿದೆ.

ಬಿಜೆಪಿ, ಹಾಗೂ ಸಂಘಪರಿವಾರಕ್ಕೆ ನಿಜವಾಗಿಯೂ ಮುಸ್ಲಿಂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ, ನಿಮಗೆ ಸಹಾನುಭೂತಿ ಇದ್ದರೆ, ನಿಮ್ಮ ಆರ್‌ ಎಸ್‌ ಎಸ್ ಗೂಂಡಾಗಳು ಗುಜರಾತ್, ಮುಜಾಫರ್ ನಗರದಲ್ಲಿ ಗಲಭೆ ಉಂಟು ಮಾಡಿದರು, ಅವರಿಗೆ ಏಕೆ ಇನ್ನೂ ನ್ಯಾಯ ಸಿಕ್ಕಿಲ್ಲ? ಜಾಕಿಯಾ ಜಾಫ್ರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಜುನೈದ್ ತಾಯಿ ಇನ್ನೂ ತನ್ನ ಮಗನಿಗಾಗಿ ಕಾಯುತ್ತಿದ್ದಾಳೆ. ನೀವು ಅವರ ಬಗ್ಗೆ ಏಕೆ ಕಾಳಜಿ ಹೊಂದಿಲ್ಲ? ಸಿಎಎ ಕಾನೂನಿನ ವಿರುದ್ಧ ಧ್ವನಿ ಎತ್ತಿದ ಮುಸ್ಲಿಂ ಮಹಿಳೆಯರನ್ನು ಜೈಲಿಗೆ ಕಳುಹಿಸಲಾಯಿತು, ಆ ಮಹಿಳೆಯರಿಗೆ ಏಕೆ ಸಹಾನುಭೂತಿ ಇಲ್ಲ? ದನದ ಹೆಸರಿನಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಹಲ್ಲೆ ನಡೆಸಲಾಯಿತು, ಆಗ ಯಾಕೆ ಮಹಿಳೆಯರು ಹಾಗೂ ಅವರ ಹಕ್ಕು, ನ್ಯಾಯದ ಬಗ್ಗೆ ಏಕೆ ಮಾತನಾಡುವುದಿಲ್ಲ?

ಬಿಜೆಪಿ, ಆರ್ ಎಸ್ ಎಸ್ ರಾಜಕೀಯ ಗೂಂಡಾಗಳಿಂದ ಅನೇಕ ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ, ಹಿಂಸಿಸಲಾಗಿದೆ, ಅವರ ವಿರುದ್ಧ ಯಾರು ಮಾತನಾಡುತ್ತಾರೆ? ಅವರಿಗೆ ಯಾವಾಗ ನ್ಯಾಯ ಸಿಗುವುದು ? ಮೀ ಟೂ ಚಳುವಳಿಯ ಸಂತ್ರಸ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ?

ಬಿಜೆಪಿ ಸರ್ಕಾರ ಒಂದು ಕಡೆ ಮುಸ್ಲಿಂ ವಿರೋಧಿ ರಾಜಕಾರಣ ಮಾಡುತ್ತಿದೆ ಮತ್ತು ಇನ್ನೊಂದೆಡೆ ಮುಸ್ಲಿಂ ಓಲೈಕೆಯ ನಾಟಕ ಮಾಡುತ್ತಿದೆ. ಇದು ಜನರ ಕಣ್ಣಿಗೆ ಮಣ್ಣನ್ನು ತುಂಬುವ ಕೆಲಸವಲ್ಲದೆ ಬೇರೇನೂ ಅಲ್ಲ.


ಎನ್. ಡಬ್ಲ್ಯೂ. ಎಫ್ ವಿನಂತಿಸುತ್ತದೆ ಏನೆಂದರೆ, ಈ ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರಿಗೆ ಇದು ಸಮಸ್ಯೆಯಲ್ಲ. ಬದಲಾಗಿ ಅವರ ಸಮಸ್ಯೆ ಶಿಕ್ಷಣ, ಪೌಷ್ಟಿಕಾಂಶ ಮತ್ತು ಸುರಕ್ಷತೆಯ ಕೊರತೆ, ಉತ್ತಮ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಅಲ್ಲದೆ ಬಹುಸಂಖ್ಯಾತ ಮುಸ್ಲಿಮರನ್ನು ಯುಎಪಿಎ ಕಾಯ್ದೆಯಡಿ ಜೈಲಿಗೆ ಕಳುಹಿಸಲಾಗಿದೆ. ಆ ಕಾನೂನನ್ನು ರದ್ದುಗೊಳಿಸಬೇಕು. ಆ ಪುರುಷರು ಮನೆಗೆ ಮರಳಿದರೆ, ಮುಸ್ಲಿಂ ಮಹಿಳೆ ಶಾಂತಿಯುತ ಜೀವನವನ್ನು ನಡೆಸುತ್ತಾಳೆ ಎಂದು ಎನ್‌ಡಬ್ಲ್ಯುಎಫ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version