ಹಾಸನ: ಬಿಜೆಪಿಯ ಅನಂತಕುಮಾರ್ ಹೆಗಡೆ ಸಂಸದನಾಗಲು ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸರ್ಕಾರ ನೌಕರರಿಗೆ ಸಂಬಳ ನೀಡಲು ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೆಗಡೆ ಯಾವ ಆಧಾರದಲ್ಲಿ ಹೇಳುತ್ತಾರೆ? ಸರ್ಕಾರೀ ನೌಕರರಲ್ಲಿ ಯಾರಾದರೂ ಸಂಬಳ ಕೊಟ್ಟಿಲ್ಲ ಅಂತ ಹೇಳಿದ್ದಾರಾ? ಹೆಗಡೆಯವರು ನಾವು ಅಧಿಕಾರಕ್ಕೆ ಬಂದರೋದೆ ಸಂವಿಧಾನ ಬದಲಾಯಿಸಲು ಅಂತ ಹೇಳಿದವರು, ಇನ್ನು ಅವರ ಮಾತಿಗೆ ಎಲ್ಲಿಂದ ಕಿಮ್ಮತ್ತು ಬಂದೀತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಯುಎಸ್ ಹಿಂದಿನ ಅಧ್ಯಕ್ಷ ದಿವಂಗತ ಅಬ್ರಹಾಂ ಲಿಂಕನ್ ಹೇಳಿದ ಮಾತನ್ನು ಉಲ್ಲೆಖಿಸಿದ ಅವರು, ಸಂಸತ್ತು ಮತ್ತು ನ್ಯಾಯಾಂಗ ಯಾವತ್ತಿಗೂ ಜನರ ಸೊತ್ತುಗಳು, ಅವರೇ ಅವುಗಳ ಮಾಲೀಕರು, ಸಂವಿಧಾನ ತಿರುಚಬೇಕೆನ್ನುವವರನ್ನು ಕಿತ್ತೊಗೆಯಬೇಕು ಎಂದು ಲಿಂಕನ್ ಹೇಳಿದ್ದರು ಅಂತ ಸಿದ್ದರಾಮಯ್ಯ ಹೇಳಿದರು. ಸಂವಿಧಾನ ಬಗ್ಗೆ ಗೌರವ ಇಲ್ಲದವರು ಸಂಸತ್ ಸದಸ್ಯನಾಗಲು ಲಾಯಕ್ಕಾ ಎಂದು ಸಿಎಂ ಪ್ರಶ್ನಿಸಿದರು.