Home ಟಾಪ್ ಸುದ್ದಿಗಳು ಧರ್ಮ ರಾಜಕಾರಣದಿಂದ ಬಿಜೆಪಿಯ ಸರ್ವನಾಶ: ಎಚ್‌.ಡಿ. ಕುಮಾರಸ್ವಾಮಿ

ಧರ್ಮ ರಾಜಕಾರಣದಿಂದ ಬಿಜೆಪಿಯ ಸರ್ವನಾಶ: ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯ ಧರ್ಮ ರಾಜಕಾರಣವೇ ಅದರ ವಿನಾಶಕ್ಕೆ ಕಾರಣವಾಗಲಿದೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವ ಬಿಜೆಪಿ ಜನರನ್ನು ಭಾವನಾತ್ಮಕವಾಗಿ ಓಲೈಸುವ ಮೂಲಕ ಮತ ಪಡೆಯಲು ಮುಂದಾಗಿದೆ. ಆದರೆ, ಮತದಾರರು ಬಿಜೆಪಿಯ ಚೇಷ್ಟೆಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿದರು.


2ಎ ಮೀಸಲಾತಿ ಬಯಸುತ್ತಿರುವ ಪಂಚಮಸಾಲಿಗಳ ಕುರಿತು ಮಾತನಾಡಿದ ಅವರು, ಕೋಟಾ ವರ್ಗವನ್ನು ನಿರ್ಧರಿಸುವ ಮೊದಲು ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿ ಮತ್ತು ಅವರ ದೈನಂದಿನ ಆದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಹೇಳಿದರು.

Join Whatsapp
Exit mobile version