ಪಂಚರಾಜ್ಯ ಚುನಾವಣೆಗೆ ಬಿಜೆಪಿ ವ್ಯಯಿಸಿದ್ದು ಎಷ್ಟು ಕೋಟಿ ಗೊತ್ತೇ ?

Prasthutha|

► ಶೇ 60ರಷ್ಟು ಹಣ ಪ. ಬಂಗಾಳಕ್ಕೆ ವ್ಯಯಿಸಿಯೂ ಸೋತ ಬಿಜೆಪಿ !

- Advertisement -

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ವ್ಯಯಿಸಿರುವ ಮೊತ್ತ ಇದೀಗ ಬಹಿರಂಗಗೊಂಡಿದೆ. ಕೇವಲ ಐದು ರಾಜ್ಯಗಳ ಚುನಾವಣೆಗೆ ಬಿಜೆಪಿಯು ಬರೋಬ್ಬರಿ 252 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಇದರಲ್ಲಿ ಶೇ. 60ರಷ್ಟು ಹಣವನ್ನು ಕೇವಲ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೇ ಖರ್ಚು ಮಾಡಿದೆ ಎಂಬ ವಿಚಾರ ಬಯಲಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಕೇರಳ, ಪುದುಚೇರಿ, ಅಸ್ಸಾಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಈ ಬಗ್ಗೆ ಸ್ವತಃ ಬಿಜೆಪಿಯೇ ಈ ಮಾಹಿತಿಯನ್ನು ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಖರ್ಚು ವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ. ಬಿಜೆಪಿಯು ಅಧಿಕಾರದ ಗದ್ದುಗೆಗೆ ಏರಲು ಭಾರೀ ಮೊತ್ತ ವ್ಯಯಿಸಿದೆ. ಪಶ್ಚಿಮ ಬಂಗಾಳ ಮಾತ್ರವಲ್ಲ ಕೇರಳ ರಾಜ್ಯದಲ್ಲೂ ಚುನಾವಣೆಗಾಗಿ ಭಾರೀ ಮೊತ್ತವನ್ನು ಬಿಜೆಪಿ ವ್ಯಯಿಸಿದೆ. ಆದರೆ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ವಿಫಲವಾಗಿರುವುದು ಗಮನಾರ್ಹ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಚುನಾವಣಾ ಖರ್ಚಿನ ಲೆಕ್ಕಪತ್ರದಲ್ಲಿ ಬಿಜೆಪಿ ಈ ವಿಷಯವನ್ನು ಬಹಿರಂಗಪಡಿಸಿದೆ.

- Advertisement -

252 ಕೋಟಿ ಹಣದ ಪೈಕಿ ಪಶ್ಚಿಮ ಬಂಗಾಳದಲ್ಲಿ 161 ಕೋಟಿ ವೆಚ್ಚ ಮಾಡಿದೆ. ತಮಿಳುನಾಡಿನಲ್ಲಿ 22.97 ಕೋಟಿ ವೆಚ್ಚ ಮಾಡಿದೆ. ಕೇರಳದಲ್ಲಿ 29.24, ಅಸ್ಸಾಂನಲ್ಲಿ 43.81 ಕೋಟಿ ಮತ್ತು ಪುದುಚೇರಿಯಲ್ಲಿ 4.79 ಕೋಟಿ ವೆಚ್ಚ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ ಬಿಜೆಪಿಯು ಹೆಚ್ಚು ಹಣ ವ್ಯಯಿಸಿರುವ ರಾಜ್ಯಗಳಲ್ಲಿ ಸೋಲು ಕಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಎಲ್‌ಡಿಎಫ್‌ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿವೆ.

Join Whatsapp
Exit mobile version