Home ಟಾಪ್ ಸುದ್ದಿಗಳು ಬಿಜೆಪಿ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ: ಪ್ರಿಯಾಂಕ ಖರ್ಗೆ

ಬಿಜೆಪಿ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ: ಪ್ರಿಯಾಂಕ ಖರ್ಗೆ

ಮೈಸೂರು: ಬಿಜೆಪಿಯವರ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಒಂದು ಯೋಜನೆಗಳ ಬಗ್ಗೆಯೂ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಏನೇ ಘಟನೆ ನಡೆದರೂ ಕೂಡ ನೆಹರೂ ವಿಚಾರ ತೆಗೆದು ನೆಹರೂ ಮೇಲೆ ಹಾಕುತ್ತಾರೆ. ರಾಜ್ಯದ ಘಟನೆ ಏನೇ ಆದರು ಸಿದ್ದರಾಮಯ್ಯ ಮೇಲೆ ಹಾಕುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಬಂದಾಗಿನಿಂದ ಕಳೆದ 48 ಗಂಟೆಗಳಲ್ಲಿ ಎಷ್ಟೆಲ್ಲ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆಂದು ಲೆಕ್ಕ ಹಾಕಿ. ವಿದ್ಯುತ್ ದರ ನಾಲ್ಕನೇ ಬಾರಿ ಹೆಚ್ಚಳ ಆಗಿದೆ ಅದರ ಬಗ್ಗೆ ಕಮೆಂಟ್ ಬಂತಾ ಎಂದು ಪ್ರಶ್ನಿಸಿದರು.

ಕಳೆದ ಒಂದು ವರ್ಷದಲ್ಲಿ ಗೋಧಿ ಹಿಟ್ಟಿನ ಬೆಲೆ 28%, ಅಕ್ಕಿ ದರ 8% ಹೆಚ್ಚಳ ಆಗಿದೆ. ಬಿಬಿಎಂಪಿ ಅವಸ್ಥೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದರು ಏನಾದರೂ ಮಾತಾಡಿದರಾ? ಬೆಂಗಳೂರು ಮತ್ತೆ ಕಳಪೆ ಸಾಧನೆ 43ನೇ ಸ್ಥಾನಕ್ಕೆ ಬಂದಿದೆ ಇದನ್ನು ಬಿಜೆಪಿಯವರು ಮಾತನಾಡಿದ್ದಾರಾ ಎಂದು ಪಶ್ನಿಸಿದ್ದಾರೆ.

Join Whatsapp
Exit mobile version