Home ರಾಷ್ಟ್ರೀಯ ವಯನಾಡ್ ದುರಂತವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಪ್ರಿಯಾಂಕಾ ಗಾಂಧಿ

ವಯನಾಡ್ ದುರಂತವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಪ್ರಿಯಾಂಕಾ ಗಾಂಧಿ

ವಯನಾಡ್: ‘ವಯನಾಡ್ ಭೂಕುಸಿತದ ದುರಂತವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ’ ಎಂದು ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.


ವಯನಾಡ್ ಲೋಕಸಭಾ ಉಪಚುನಾವಣೆಗೆ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಕೆನಿಚಿರದಿಂದ ಎರಡನೇ ದಿನದ ಪ್ರಚಾರ ಪ್ರಾರಂಭಿಸಿರುವ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ಜನರಿಗೆ ಅಪಾರ ನೋವು ತಂದ ಅನಾಹುತವನ್ನು ನೀವು(ಬಿಜೆಪಿ) ರಾಜಕೀಯಗೊಳಿಸುತ್ತಿದ್ದೀರಿ. ಇಂದು ಅದೇ ಸ್ಥಳದಲ್ಲಿ ನಿಂತು ನಾವು ಪ್ರಚಾರ ಪ್ರಾರಂಭಿಸಿದ್ದೇವೆ. ನಿಮ್ಮ(ಬಿಜೆಪಿ) ದೇಶ, ನಿಮ್ಮ ಸ್ವಂತ ಅಗತ್ಯಗಳು ಮತ್ತು ನಮ್ಮ ರಾಷ್ಟ್ರದಲ್ಲಿ ನೀವು ಬಯಸುವ ರೀತಿಯ ರಾಜಕೀಯದ ಬಗ್ಗೆ ನೀವು ಯೋಚಿಸಬೇಕಾದ ಸ್ಥಳದಲ್ಲಿ ನಾವು ನಿಂತಿದ್ದೇವೆ’ ಎಂದು ಕಿಡಿಕಾರಿದರು.


‘ಬಿಜೆಪಿಯ ಸಿದ್ದಾಂತವು ದ್ವೇಷ, ವಿಭಜನೆ ಮತ್ತು ವಿನಾಶದಿಂದ ಕೂಡಿದ್ದು, ಇದು ದೇಶದಾದ್ಯಂತ ಹರಡುತ್ತಿದೆ. ಆ ಮೂಲಕ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಕಡೆಗಣಿಸಲಾಗುತ್ತಿದೆ’ ಎಂದರು.
‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅವ್ಯಾಹತವಾಗಿದೆ. ಬೆಲೆ ಏರಿಕೆ ನಿರಂತವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸುವತ್ತ ಬಿಜೆಪಿ ಗಮನಹರಿಸುತ್ತಿಲ್ಲ. ಇವುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಏಕೆಂದರೆ ಯಾವುದೇ ಬೆಲೆ ತೆತ್ತಾದರೂ ಅಧಿಕಾರದಲ್ಲಿ ಉಳಿಯಬೇಕೆಂಬುವುದು ಬಿಜೆಪಿಯ ಏಕೈಕ ಗುರಿಯಾಗಿದೆ’ ಎಂದು ಕಿಡಿಕಾರಿದರು.

‘ಸಂಸತ್ತಿನಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಂದು ಅವಕಾಶ ಕೊಟ್ಟರೆ, ನಿಮ್ಮ ಸಮಸ್ಯೆಗಳಿಗೆ ನಾನು ಧ್ವನಿಯಾಗುತ್ತೇನೆ. ನಿಮಗಾಗಿ ನಾನು ಹೋರಾಟ ಮಾಡುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತರುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

Join Whatsapp
Exit mobile version