Home ಟಾಪ್ ಸುದ್ದಿಗಳು ಉಪರಾಷ್ಟ್ರಪತಿ ರೇಸ್ ಗೆ ಬಿಜೆಪಿಯಿಂದ ಮೂವರು ಮುಸ್ಲಿಮರ ಹೆಸರು!

ಉಪರಾಷ್ಟ್ರಪತಿ ರೇಸ್ ಗೆ ಬಿಜೆಪಿಯಿಂದ ಮೂವರು ಮುಸ್ಲಿಮರ ಹೆಸರು!

ನವದೆಹಲಿ: ರಾಷ್ಟ್ರದ 16ನೇ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಆಗಸ್ಟ್ 6 ರಂದು ನಡೆಯಲಿರುವ ಚುನಾವಣೆಗೆ ನಿನ್ನೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಅತ್ಯುನ್ನತ ಹುದ್ದೆಗಾಗಿ ಎನ್ ಡಿಎ ಯಿಂದ ಮೂವರು ಮುಸ್ಲಿಂ ಸಮುದಾಯದ ಹಾಗೂ ಒಬ್ಬರು ಸಿಖ್ ಸಮುದಾಯದ ನಾಯಕರ ಹೆಸರು ಕೇಳಿ ಬರುತ್ತಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿವೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಡಳಿತಾರೂಢ ಮೈತ್ರಿಕೂಟದಿಂದ ನಾಲ್ಕನೇ ಸಂಭಾವ್ಯ ಅಭ್ಯರ್ಥಿ.

ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಮುಂದಿನ ಉಪರಾಷ್ಟ್ರಪತಿ ಆಗಸ್ಟ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 22 ಕೊನೆಯ ದಿನಾಂಕವಾಗಿದೆ. ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸಲು ‘ಪಸ್ಮಾಂಡ’ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮರ್ಥ, ವಿವಾದರಹಿತ ನಾಯಕನನ್ನು ಆಯ್ಕೆ ಮಾಡಲು ತೀವ್ರ ಹುಡುಕಾಟ ನಡೆಯುತ್ತಿದೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಅಗತ್ಯವಿರುವ ಪ್ರೊಫೈಲ್ ಪ್ರಕಾರ ಯಾರೂ ಸಿಗದಿದ್ದರೆ, ಪಕ್ಷವು ಆರಿಫ್ ಮುಹಮ್ಮದ್ ಖಾನ್, ನಖ್ವಿ, ನಜ್ಮಾ ಹೆಪ್ತುಲ್ಲಾ ಮತ್ತು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್  ಹೆಸರುಗಳಲ್ಲಿ ಯಾವುದಾದರೂ ಒಂದು ಹೆಸರನ್ನು ಆಯ್ಕೆ ಮಾಡಬಹುದು ಎಂದು ತಿಳಿಸಿದ್ದಾರೆ

Join Whatsapp
Exit mobile version