Home ಟಾಪ್ ಸುದ್ದಿಗಳು ಬಂಧನಕ್ಕೂ ಮೊದಲೇ ದಾಖಲೆ ನಾಶಪಡಿಸಿದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ

ಬಂಧನಕ್ಕೂ ಮೊದಲೇ ದಾಖಲೆ ನಾಶಪಡಿಸಿದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ

ಬೆಂಗಳೂರು: ಪಿಎಸ್ ಐ ಅಕ್ರಮ ನೇಮಕಾತಿಯ ಪ್ರಮುಖ ಕಿಂಗ್ ಪಿನ್ , ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಗುರುವಾರ ಸಿಐಡಿ ಬಂಧಿಸಿದ್ದು, ಇದಕ್ಕೂ ಮೊದಲೇ ಅಕ್ರಮದ ದಾಖಲೆಗಳನ್ನು ನಾಶಪಡಿಸಲು ಆರೋಪಿ ಮೂಬೈಲ್ ಒಡೆದು ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಕ್ರಮ ನಡೆಸಿರುವ ಯಾವ ದಾಖಲೆಗಳು ಸಿಗಬಾರದು ಎನ್ನುವ ನಿಟ್ಟಿನಲ್ಲಿ ದಿವ್ಯಾ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ.


ದಿವ್ಯಾ ಎಸೆದಿರುವ ಮೊಬೈಲ್, ಅದರ ಒಡೆದ ತುಣುಕುಗಳು, ಸಿಮ್‌ಕಾರ್ಡ್ ಪೊಲೀಸರಿಗೆ ಸಿಕ್ಕವೇ ಇಲ್ಲವೇ ಎಂಬುದು ಇನ್ನುವುದು ಸ್ಪಷ್ಟವಾಗಿಲ್ಲ. ಮಹಾರಾಷ್ಟ್ರದ ಪುಣೆಯ ಬಳಿ ದಿವ್ಯಾಳನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಸೇರಿ ಏಳು ಮಂದಿಯನ್ನು 11 ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ.


ಶುಕ್ರವಾರ ರಾತ್ರಿ ನಗರದ ಮಹಿಳಾ ನಿಲಯದಲ್ಲಿ ದಿವ್ಯಾಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು, ಆ ಬಳಿಕ ಅಧಿಕಾರಿಗಳು ಐವಾನ್ ಇ ಶಾಹಿ ಅತಿಥಿಗೃಹಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

Join Whatsapp
Exit mobile version