Home ಟಾಪ್ ಸುದ್ದಿಗಳು ಗಲಾಟೆ ಮಾಡಿದ್ದು ನಿಜ, ಆದರೆ ಕೊಲೆ ಮಾಡಿಲ್ಲ: ಬಿಜೆಪಿ ಮುಖಂಡ ಅನಂತರಾಜು ಪತ್ನಿ

ಗಲಾಟೆ ಮಾಡಿದ್ದು ನಿಜ, ಆದರೆ ಕೊಲೆ ಮಾಡಿಲ್ಲ: ಬಿಜೆಪಿ ಮುಖಂಡ ಅನಂತರಾಜು ಪತ್ನಿ

ಬೆಂಗಳೂರು: ಪತಿ, ಬಿಜೆಪಿ ಮುಖಂಡ ಅನಂತರಾಜುಗೆ ರೇಖಾ ಜೊತೆ ಸಂಬಂಧ ಇದೆ ಎಂಬ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ. ಆದರೆ ತಾನು ಅವರನ್ನು ಕೊಲೆ ಮಾಡಿಲ್ಲ ಎಂದು ಪತ್ನಿ ಸುಮಾ ಹೇಳಿದ್ದಾರೆ.

ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 22ಕ್ಕೆ ನನಗೆ ವಿಚಾರ ಗೊತ್ತಾಗಿದ್ದು. ಹೋಮ್ ಅರೆಸ್ಟ್ ಆರೋಪ ಸುಳ್ಳು. ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಬ್ಲ್ಯಾಕ್ಮೇಲ್ ಮೆಸೇಜ್ ಬಂದ ಬಳಿಕ ನಾನು ಕೋಪ ಬಂದು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರು.

ಗಂಡನನ್ನು ನಾನು ಕೊಲೆ ಮಾಡಿಲ್ಲ. ನಾನು ಗಂಡನ ಸಾಯಿಸೋವಷ್ಟು ಕೆಟ್ಟವಳಲ್ಲ. ನನ್ನ ಮಕ್ಕಳಿಗೆ ಅಪ್ಪ ಇಲ್ಲ ಅನ್ನೋ ನೋವು ಇದೆ. ಮೆಂಟಲಿ ಟಾರ್ಚರ್ ಆಗುತ್ತಿದೆ. ಕೆಲವೊಂದು ಕ್ಲಿಪ್ಪಿಂಗ್ ಅಷ್ಟೇ ರೇಖಾ ಕೊಟ್ಟಿದ್ದಾಳೆ. ಅನಂತರಾಜು ನನಗೆ ಇಲ್ಲ ಅಂದರೆ ನಿನಗೂ ಸಿಗಬಾರದು ಅಂತ ರೇಖಾ ಧಮ್ಕಿ ಹಾಕಿದ್ದಳು. ಗಂಡನಿಗೆ ರೇಖಾ ಟಾರ್ಚರ್ ಕೊಡುತ್ತಿದ್ದಳು ಎಂದು ಅವರು ಹೇಳಿದ್ದಾರೆ.

Join Whatsapp
Exit mobile version