Home ಟಾಪ್ ಸುದ್ದಿಗಳು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ: ರೇಣುಕಾಚಾರ್ಯ

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ: ರೇಣುಕಾಚಾರ್ಯ

ಚಿತ್ರದುರ್ಗ: ಬಿಜೆಪಿ, ಜೆಡಿಎಸ್ ಮೈತ್ರಿ ಕೇವಲ ರಾಷ್ಟ್ರೀಯ ನಾಯಕರ ಮಧ್ಯೆ ಚರ್ಚೆ ಆಗಿದೆ. ಆದರೆ ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ದರೆ ಎರಡು ಪಕ್ಷಗಳ ಮಧ್ಯೆ ಸಂಘರ್ಷವಾಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ರೇಣುಕಾಚಾರ್ಯ ಹೇಳಿದ್ದಾರೆ.

ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ರೇಣುಕಾಚಾರ್ಯ ಮಾತನಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಕೇವಲ ರಾಷ್ಟ್ರೀಯ ನಾಯಕರ ಮಧ್ಯೆ ಚರ್ಚೆ ಆಗಿದೆ. ಮೈತ್ರಿ ಎಂದರೆ ಕಾರ್ಯಕರ್ತರ ಮಧ್ಯೆ ಸಾಮರಸ್ಯವಿರಬೇಕು. ಆದರೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಸಂಘರ್ಷವಿದೆ. ಈ ಮೈತ್ರಿ ಬೂತ್ ಮಟ್ಟ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಆಗಬೇಕು. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೇ ಮೋಸ ಮಾಡಿದ ವಚನಭ್ರಷ್ಟರೊಂದಿಗೆ ಮೈತ್ರಿ ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ ಎಂದರು.

Join Whatsapp
Exit mobile version