Home ಕರಾವಳಿ ‘ನಾವು ಬಿಜೆಪಿಯವರೊಟ್ಟಿಗೆ ಇದ್ದರೆ ಹೆಣವಾಗುತ್ತೇವೆ’: ಹಿಜಾವೇ ಸಂಸ್ಥಾಪಕ ಮಹೇಶ್ ಶೆಟ್ಟಿ

‘ನಾವು ಬಿಜೆಪಿಯವರೊಟ್ಟಿಗೆ ಇದ್ದರೆ ಹೆಣವಾಗುತ್ತೇವೆ’: ಹಿಜಾವೇ ಸಂಸ್ಥಾಪಕ ಮಹೇಶ್ ಶೆಟ್ಟಿ

ಬೆಳ್ಳಾರೆಯಲ್ಲಿ ಕಾರು ಪಂಕ್ಚರ್ ಅಲ್ಲ ನಳಿನ್’ನ ತಲೆ ಒಡೆಯಬೇಕಿತ್ತು

ಬೆಳ್ಳಾರೆ: ನಾವು ಬಿಜೆಪಿಯವರೊಟ್ಟಿಗೆ ಇದ್ದರೆ ಹೆಣವಾಗುತ್ತೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಬೆಳ್ಳಾರೆಯಲ್ಲಿ ಗಾಡಿ ಪಂಕ್ಚರ್ ಅಲ್ಲ ರಾಜ್ಯಾಧ್ಯಕ್ಷರ ತಲೆ ಒಡೆಯಬೇಕಿತ್ತು. ಹಿಂದೂ ರಾಷ್ಟ್ರ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹಿಂದೂಗಳನ್ನೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಪ್ರವೀಣ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲು ಹಿಂದೂ ಸಮಾಜ ಆಗ್ರಹಿಸಿದ್ದರೆ, ಈಗ ಸರಕಾರ 25 ಮತ್ತು ಬಿಜೆಪಿ 50 ಲಕ್ಷ ನೀಡಿ ಕೈತೊಳೆದುಕೊಂಡಿದೆ. 40 ಶೇಕಡಾ ಕಮಿಷನ್ ಹೊಡೆಯುವ ಬಿಜೆಪಿಗರು ಇದರಲ್ಲಿ 50 ಶೇಕಡಾ ಕಮಿಷನ್ ಹೊಡೆದಿರಬೇಕು ಎಂದು ಆರೋಪಿಸಿದ್ದಾರೆ.

Join Whatsapp
Exit mobile version