Home ಕರಾವಳಿ ವೋಟ್ ನೀಡದ ಮುಸ್ಲಿಮರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಬಿಜೆಪಿಗೆ ಇದೆ: ಸ್ವಪಕ್ಷದ ವಿರುದ್ಧವೇ...

ವೋಟ್ ನೀಡದ ಮುಸ್ಲಿಮರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಬಿಜೆಪಿಗೆ ಇದೆ: ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಶಾಸಕ ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ: ಮತ ನೀಡದ ಮುಸ್ಲಿಮರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಬಿಜೆಪಿಗೆ ಇದೆ ಎಂದು ಸ್ವ ಪಕ್ಷದ ವಿರುದ್ಧವೇ ಶಾಸಕ ಉಮಾನಾಥ ಕೋಟ್ಯಾನ್ ವಾಗ್ದಾಳಿ ನಡೆಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಕಿನ್ನಿಗೋಳಿಯ ಮುಸ್ಲಿಮ್ ಸಮುದಾಯದವರ ಜೊತೆಗಿನ ಸಭೆ ವೇಳೆ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ರೀತಿ ಅಹಂಕಾರ ಮನೋಭಾವ ಹೊಂದಿದೆ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೂಲಿಯಾಳುಗಳಂತೆ ನೋಡುತ್ತಿದೆ. ಬಿಜೆಪಿ ಪಕ್ಷದವರಿಗೆ ನಮಗೆ ವೋಟ್ ನೀಡದ ಮುಸಲ್ಮಾನರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಇದೆ. ಹೀಗೆ ಎರಡೂ ಪಕ್ಷಗಳು ಕ್ರೈಸ್ತರು ಹಾಗೂ ಮುಸಲ್ಮಾನರ ಕುರಿತು ಇಂತಹ ಅಹಂಕಾರ ಭಾವ ಹೊಂದಿದೆ. ಈ ಎರಡಕ್ಕೂ ನಾನು ವಿರೋಧಿಯಾಗಿ ಕೆಲಸ ಮಾಡಿದ್ದೇನೆ ಎಂದರು. ನನ್ನ ಐದು ವರ್ಷದ ಅವಧಿಯಲ್ಲಿ ನಾನು ಯಾವುದೇ ಕೋಮು ಗಲಭೆ, ಕೋಮು ಭಾಷಣ ಮಾಡಿದರೆ ಹೇಳಿ. ನಾನು ಯಾವತ್ತೂ ಭೇದ ಮಾಡದೇ ಸಮಾನವಾಗಿ ಕೆಲಸ ಮಾಡಿದ್ದೇನೆ ಎಂದರು.

Join Whatsapp
Exit mobile version