Home ಟಾಪ್ ಸುದ್ದಿಗಳು ಔರಂಗಬಾದ್ ಹೆಸರು ಬದಲಾವಣೆ ವಿರುದ್ಧ ಪ್ರತಿಭಟನೆ: ಸಂಸದ ಜಲೀಲ್ ಸಹಿತ ಹಲವರ ವಿರುದ್ಧ ಮೊಕದ್ದಮೆ

ಔರಂಗಬಾದ್ ಹೆಸರು ಬದಲಾವಣೆ ವಿರುದ್ಧ ಪ್ರತಿಭಟನೆ: ಸಂಸದ ಜಲೀಲ್ ಸಹಿತ ಹಲವರ ವಿರುದ್ಧ ಮೊಕದ್ದಮೆ

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಔರಂಗಬಾದ್ ನಗರದ ಹೆಸರನ್ನು ಛತ್ರಪತಿ ಸಂಭಾಜಿನಗರ್ ಎಂದು ಬದಲಿಸುವುದರ ವಿರುದ್ಧ ಒಂದೂವರೆ ಸಾವಿರಕ್ಕೂ ಹೆಚ್ಚು ಜನರ ಜೊತೆ ಪ್ರತಿಭಟನೆ ನಡೆಸಿದ ಸ್ಥಳೀಯ ಎಐಎಂಐಎಂ ಸಂಸದ ಇಮ್ತಿಯಾಝ್ ಜಲೀಲ್ ಮತ್ತಿತರರ ವಿರುದ್ಧ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಗುರುವಾರ ರಾತ್ರಿ ಅಖಿಲ ಭಾರತ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಸಂಸದ ಇಮ್ತಿಯಾಝ್ ಅವರು ಕಲೆಕ್ಟರೇಟ್ ನಿಂದ ಜುಬಿಲೀ ಉದ್ಯಾನದವರೆಗೆ ಮೇಣದ ಬತ್ತಿ ಬೆಳಕು ಹಿಡಿದ ಪ್ರತಿಭಟನಾ ಮೆರವಣಿಗೆ ನಡೆಸಿದರು.


ಹೆಸರು ಬದಲಾವಣೆ ವಿರೋಧಿ ಸಮಿತಿಯವರಿಗೆ ಈ ಕ್ಯಾಂಡಲ್ ಲೈಟ್ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದ್ದರೂ ನಡೆಸಿದ್ದಾರೆ ಎಂದು ಅಧಿಕಾರಿ ಅಯ್ಯೂಬ್ ಜಹಾಂಗೀರ್ ಹೇಳಿದರು.
“ಜಲೀಲ್ ಜಹಗೀರದಾರ ಮತ್ತು 1,500 ಮಂದಿ ಪ್ರತಿಭಟನಕಾರರು ಭಾರತೀಯ ದಂಡ ಸಂಹಿತೆ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಂತೆ ಕಾನೂನುಬಾಹಿರವಾಗಿ ಗುಂಪು ಸೇರಿದ್ದಕ್ಕಾಗಿ ಪ್ರಕರಣ ಹೂಡಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರದಿಂದ ಅನುಮೋದನೆ ಪಡೆದುಕೊಂಡ ಕೇಂದ್ರ ಸರಕಾರವು ಕಳೆದ ವಾರ ಔರಂಗಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ್ ಮತ್ತು ಒಸ್ಮಾನಾಬಾದನ್ನು ದಾರಾಶಿವ್ ಎಂದು ಹೆಸರಿಸುವ ಸುತ್ತೋಲೆ ಹೊರಡಿಸಿತ್ತು.

Join Whatsapp
Exit mobile version