Home ಕರಾವಳಿ ಮಂಗಳೂರು: ಮಗುವನ್ನೇ ಬದಲಾಯಿಸಿ ಕೊಟ್ಟ ಲೇಡಿಗೋಶನ್ ಆಸ್ಪತ್ರೆ ವೈದ್ಯರು..! | DNA ಪರೀಕ್ಷೆಗೆ ಪೋಷಕರ ಒತ್ತಾಯ

ಮಂಗಳೂರು: ಮಗುವನ್ನೇ ಬದಲಾಯಿಸಿ ಕೊಟ್ಟ ಲೇಡಿಗೋಶನ್ ಆಸ್ಪತ್ರೆ ವೈದ್ಯರು..! | DNA ಪರೀಕ್ಷೆಗೆ ಪೋಷಕರ ಒತ್ತಾಯ

ಮಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿಗೆ ಗಂಡು ಮಗು ನೀಡಿ ಸಾಗ ಹಾಕಿದ್ದ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯ ಮಹಾ ಎಡವಟ್ಟು ಬಯಲಾಗಿದೆ. ಆಸ್ಪತ್ರೆಯ ಈ ಎಡವಟ್ಟಿನ ಬಗ್ಗೆ ಪೋಷಕರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹೆಣ್ಣು ಹೆತ್ತ ತಾಯಿಗೆ ನೀಡಿದ್ರು ಗಂಡು ಮಗು | ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ಎಡವಟ್ಟೋ, ದಂಧೆಯೋ..!!?


ಕುಂದಾಪುರ ಮೂಲದ ಅಮ್ಬ್ರೀನ್ ಎಂಬವರು ಸೆಪ್ಟಂಬರ್ 27 ರಂದು ಹೆರಿಗೆಗಾಗಿ ದಾಖಲಾಗಿದ್ದು, ತಡರಾತ್ರಿ 12 ಗಂಟೆ ಹೆರಿಗೆ ಆಗಿತ್ತು. ಆಸ್ಪತ್ರೆ ದಾಖಲಾತಿ ಪ್ರಕಾರ ಮಗುವನ್ನು ‘ಹೆಣ್ಣು’ ಎಂಬುದಾಗಿ ನಮೂದಿಸಲಾಗಿತ್ತು. ಆದರೆ ಮಗುವಿನ ದೈಹಿಕ ತೂಕ ಕಡಿಮೆ ಇದೆ ಅನ್ನೋ ಕಾರಣವೊಡ್ಡಿ ಕಳೆದ 18 ದಿನಗಳಿಂದ ಮಗುವನ್ನು ಐಸಿಯುನಲ್ಲಿ ಇರಿಸಿದ್ದಾಗಿ ಪೋಷಕರು ತಿಳಿಸಿದ್ದಾರೆ.


ಆದರೆ, ನಿನ್ನೆ ದಿನ ಪೋಷಕರು ಮಗು ಹಾಗೂ ತಾಯಿಯನ್ನು ಡಿಸ್ಚಾರ್ಜ್ ಮಾಡುವಂತೆ ತಿಳಿಸಿದ್ದು, ಮಗುವಿಗೆ ಮಲ ವಿಸರ್ಜನೆ ಸಮಸ್ಯೆ ಇರುವುದಾಗಿ ಲೇಡಿಗೋಶನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ತಕ್ಷಣವೇ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಅಮ್ಬ್ರೀನ್ ಪತಿ ಮುಸ್ತಫಾ ನಿರ್ಧರಿಸಿದ್ದಾರೆ. ಅಂತೆಯೇ,‌ ಬ್ರಹ್ಮಾವರಕ್ಕೆ ಕೊಂಡೊಯ್ಯಲಾಗಿದ್ದು ಅಲ್ಲಿ ಮಗು ಬದಲಾಯಿಸಿ ಕೊಟ್ಟಿರುವ ವಿಚಾರ ಬಯಲಾಗಿದೆ.


ಇದರಿಂದ ಕುಪಿತರಾದ ಪೋಷಕರು ಮತ್ತೆ ವಾಪಸ್ ಮಂಗಳೂರಿಗೆ ಆ್ಯಂಬುಲೆನ್ಸ್ ಮೂಲಕ ಕರೆ ತಂದಿದ್ದು ಲೇಡಿಗೋಶನ್ ಆಸ್ಪತ್ರೆ ವೈದ್ಯರ ಸುಪರ್ದಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಬೆಂಬಲದೊಂದಿಗೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಸ್ಥಳಕ್ಕೆ ಆಗಮಿಸಿದ ಬಂದರು ಪೊಲೀಸರು ಘಟನೆ ಕುರಿತು ಪರಿಶೀಲಿಸಿದ್ದಾರೆ. ಮಗುವಿನ DNA ಪರೀಕ್ಷೆ ನಡೆಸಿ ನ್ಯಾಯ ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Join Whatsapp
Exit mobile version