Home ಟಾಪ್ ಸುದ್ದಿಗಳು ಅಣ್ಣ ಮೃತಪಟ್ಟ ಒಂದು ವರ್ಷದ ಬಳಿಕ ಅದೇ ದಿನವೇ ಸಾವನ್ನಪ್ಪಿದ ತಮ್ಮ!

ಅಣ್ಣ ಮೃತಪಟ್ಟ ಒಂದು ವರ್ಷದ ಬಳಿಕ ಅದೇ ದಿನವೇ ಸಾವನ್ನಪ್ಪಿದ ತಮ್ಮ!

ಹಾಸನ: ಅಣ್ಣ ಮೃತಪಟ್ಟ ಒಂದು ವರ್ಷದ ನಂತರ ಅದೇ ದಿನವೇ ತಮ್ಮ ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.


ನೆಟ್ಟೆಕೆರೆ ಗ್ರಾಮದ ಪುಟ್ಟಸ್ವಾಮಿ-ಸರೋಜಾ ದಂಪತಿಗೆ ಶ್ರೀಧರ್ (22), ದಿಲೀಪ್ (21) ಇಬ್ಬರು ಗಂಡು ಮಕ್ಕಳಿದ್ದರು. ಕಳೆದ ವರ್ಷ ಅಂದರೆ 2022ರ ಜ. 9ರಂದು ಹಿರಿಯ ಮಗ ಶ್ರೀಧರ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು.


ಶ್ರೀಧರ್ ಸಹೋದರ ದಿಲೀಪ್ ಇದೇ ಜ.4ರಂದು ಅತಿ ವೇಗವಾಗಿ ಬೈಕ್ ಚಾಲನೆ ಮಾಡಿ ಬೇಲೂರು ತಾಲೂಕಿನ ರಾಯಪುರ ಬಳಿಯ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯ ಹೊಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ದಿಲೀಪ್’ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.


ಅಣ್ಣ ಸಾವನ್ನಪ್ಪಿದ ಒಂದು ವರ್ಷದ ನಂತರ ಅದೇ ದಿನಾಂಕದಂದು ತಮ್ಮ ದಿಲೀಪ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಸ್ವಗ್ರಾಮ ನೆಟ್ಟೆಕೆರೆಯಲ್ಲಿ ದಿಲೀಪ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದಿಲೀಪ್ ಬೈಕ್ ಅಪಘಾತದ ವೀಡಿಯೋ ಸಿಸಿಟಿಯಲ್ಲಿ ಸೆರೆಯಾಗಿದ್ದು, ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Join Whatsapp
Exit mobile version