Home ಟಾಪ್ ಸುದ್ದಿಗಳು ಬಿಹಾರ: ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ; ಬೇಸರ ವ್ಯಕ್ತಪಡಿಸಿದ ಶಿಕ್ಷಕರು

ಬಿಹಾರ: ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ; ಬೇಸರ ವ್ಯಕ್ತಪಡಿಸಿದ ಶಿಕ್ಷಕರು

DHAKA, BANGLADESH - SEPTEMBER 12, 2021: Students attend a class at Narinda Govt. High School, in Dhaka Bangladesh on September 12, 2021. After 543 days, primary, secondary and higher secondary schools across the country reopened maintaining Covid-19 guidelines and health protocols. (Photo by Stringer/Anadolu Agency via Getty Images)

ಪಟ್ನಾ: ಶಾಲೆಯ ವಾರದ ರಜೆಯನ್ನು ಭಾನುವಾರದ ಬದಲು ಶುಕ್ರವಾರ ನೀಡಿರುವ ಘಟನೆ ಮುಸ್ಲಿಂ ಬಾಹುಳ್ಯವಿರುವ ಬಿಹಾರದ ಕಿಶನ್‌ಗಂಜ್‌ನಲ್ಲಿನಡೆದಿದೆ.


ಇಲ್ಲಿ ಒಟ್ಟು 37 ಸರ್ಕಾರಿ ಶಾಲೆಗಳಿದ್ದು, ಎಲ್ಲಾ ಶಾಲೆಗಳಿಗೆ ಭಾನುವಾರದ ರಜೆ ಇರುತ್ತದೆ. ಆದರೆ ಜಿಲ್ಲೆಯ ಪೋಥಿಯಾ ಬ್ಲಾಕ್‌ನಲ್ಲಿ, ಗರಿಷ್ಠ 16 ಶಾಲೆಗಳಿಗೆ ಶುಕ್ರವಾರ ರಜೆ ನೀಡಿ, ಭಾನುವಾರ ಶಾಲೆಗಳನ್ನು ನಡೆಸಲಾಗುತ್ತದೆ. ಪೋಥಿಯಾ ಬ್ಲಾಕ್ ಏಷ್ಯಾದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ಬ್ಲಾಕ್ ಆಗಿದೆ. ಶೇ.60ರಷ್ಟು ಮುಸ್ಲಿಂ ವಿದ್ಯಾರ್ಥಿಗಳಿರುವ ಕಾರಣದಿಂದಾಗಿ ಈ ಶಾಲೆಗಳಿಗೆ ಶುಕ್ರವಾರ ರಜೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.


ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಕ್ರವಾರದ ಪ್ರಾರ್ಥನೆಗೆ ಸುಲಭವಾಗಲು ರಜೆ ನೀಡಲಾಗುತ್ತಿದ್ದು, ವಾರದ ರಜೆ ಶುಕ್ರವಾರದಂದು ನೀಡುವ ಸಂಪ್ರದಾಯ ಈ ಶಾಲೆಗಳಲ್ಲಿ ಹಲವು ವರ್ಷಗಳಿಂದ ಇದೆ ಎನ್ನಲಾಗಿದೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ಧ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಮೊದಲಿನಿಂದಲೂ ಈ ಜಿಲ್ಲೆಯ ಶಾಲೆಗೆ ಶುಕ್ರವಾರದ ದಿನವೇ ರಜೆ ನೀಡಲಾಗುತ್ತಿದೆ ಎಂದು ಕರ್ಬಲಾ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಮುಹಮ್ಮದ್ ವಾಸಿಂ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದ ಆದೇಶವಿದೆಯೇ ಇಲ್ಲವೇ ಎಂಬ ಬಗ್ಗೆ ಅವರಿಗೂ ಮಾಹಿತಿ ಇಲ್ಲ ಎನ್ನಲಾಗಿದೆ.
ಇದೀಗ ಭಾನುವಾರ ಶಾಲೆಗೆ ಹೋಗುವ ಶಿಕ್ಷಕರು ತಮ್ಮ ಕುಟುಂಬ ಮತ್ತು ಮಕ್ಕಳ ಜೊತೆ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಈಗ ವಾರದ ರಜೆಯನ್ನು ಆಚರಿಸುವ ಕುರಿತು ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆ NCPCR ಬುಧವಾರ ಬಿಹಾರ ಸರ್ಕಾರದಿಂದ ವಿವರಣೆಯನ್ನು ಕೇಳಿದ್ದು, ಈ ಬಗ್ಗೆ 10 ದಿನಗಳಲ್ಲಿ ಬಿಹಾರ ಸರ್ಕಾರದಿಂದ ವರದಿ ಸಲ್ಲಿಸಲು ಆದೇಶಿಸಿದೆ.

Join Whatsapp
Exit mobile version