Home ಟಾಪ್ ಸುದ್ದಿಗಳು ಬಿಹಾರ | ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ

ಬಿಹಾರ | ಪ್ರಿಯಕರನೊಂದಿಗೆ ಓಡಿ ಹೋಗಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ

0

ಪಾಟ್ನಾ: ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ತಂದೆಯೇ ಸ್ವಂತ ಮಗಳನ್ನು ಕೊಂದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿ ತಂದೆಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಾಕ್ಷಿ (25) ಕೊಲೆಯಾದ ಯುವತಿ. ಆರೋಪಿ ಮುಖೇಶ್ ಸಿಂಗ್ ಕೊಲೆ ಮಾಡಿದ ತಂದೆ. ಆಕೆಯ ಶವವನ್ನು ಕಳೆದ ರಾತ್ರಿ ತಮ್ಮ ಮನೆಯ ಸ್ನಾನಗೃಹದಿಂದ ಹೊರತೆಗೆಯಲಾಗಿದೆ. ಮಗಳನ್ನು ಕೊಂದಿದ್ದ ಮುಖೇಶ್‌ ಸಿಂಗ್‌ ಬಾಯ್‌ ಫ್ರೆಂಡ್‌ ನನ್ನು ಮಗಿಸಲು ಸ್ಕೆಚ್‌ ಹಾಕಿದ್ದ. ಆದ್ರೆ, ಆತ ಗ್ರಾಮದಲ್ಲೇ ಇರಲಿಲ್ಲ ಎಂದು ವರದಿಗಳು ತಿಳಿದಿವೆ.

ಏನಿದು ಘಟನೆ?
ಸಮಸ್ತಿಪುರದ ನಿವಾಸಿ ಸಾಕ್ಷಿ ಎಂಬ ಯುವತಿ ತನ್ನ ಕಾಲೇಜಿನಲ್ಲೇ ಓದುತ್ತಿದ್ದ ಯುವನೊಂದಿಗೆ ದೆಹಲಿಗೆ ಓಡಿಹೋಗಿದ್ದಳು. ಈ ವಿಷಯವನ್ನು ಕೊಲೆಯಾದ ಸಾಕ್ಷಿ ಅವರ ಚಿಕ್ಕಪ್ಪ ವಿಪಿನ್‌ ಕುಮಾರ್‌ ತಿಳಿಸಿದ್ದರು. ನಿವೃತ್ತ ಸೇನಾಧಿಕಾರಿಯಾಗಿದ್ದ ಆರೋಪಿ ಮುಖೇಶ್ ಸಿಂಗ್, ಏಪ್ರಿಲ್‌ 7ರಂದು ತನ್ನ ಮಗಳನ್ನು ಮನೆಗೆ ಬರುವಂತೆ ಮನವೊಲಿಸಿದ್ದ. ಮನೆಗೆ ಬಂದ ಒಂದೆರಡು ದಿನಗಳಲ್ಲೇ ಮಗಳು ಮತ್ತೆ ಕಾಣೆಯಾದಳು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.

ಸಾಕ್ಷಿ ಅವರ ತಾಯಿಯನ್ನು ವಿಚಾರಿಸಿದಾಗ, ಅವಳು ಮತ್ತೆ ತನ್ನ ಪ್ರಿಯಕರನೊಂದಿಗೆ ಹೋಗಿರಬಹುದು ಅಂತ ಹೇಳಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು.

ತನಿಖೆ ಭಾಗವಾಗಿ ಮನೆಯನ್ನ ಪರಿಶೀಲಿಸುವಾಗ ಬೀಗ ಹಾಕಿದ್ದ ಸ್ನಾನಗೃಹದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದರು. ಬೀಗ ತೆಗೆದಾಗ ರಕ್ತದ ಮಡುವಿನಲ್ಲಿ ಮಗಳ ಶವ ಬಿದ್ದಿತ್ತು. ಈ ಕುರಿತು ಆರೋಪಿ ತಂದೆ ಮುಖೇಶ್‌ ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

NO COMMENTS

LEAVE A REPLY

Please enter your comment!
Please enter your name here

Exit mobile version